ಆಲ್ಕೋಹಾಲ್, ಗನ್ ಸಂಸ್ಕೃತಿಯನ್ನು ವೈಭವೀಕರಿಸುವ ಹಾಡು ಪ್ರಸಾರ ಮಾಡದಂತೆ ಕೇಂದ್ರ ಸೂಚನೆ! - Mahanayaka

ಆಲ್ಕೋಹಾಲ್, ಗನ್ ಸಂಸ್ಕೃತಿಯನ್ನು ವೈಭವೀಕರಿಸುವ ಹಾಡು ಪ್ರಸಾರ ಮಾಡದಂತೆ ಕೇಂದ್ರ ಸೂಚನೆ!

fm radio channels
02/12/2022

ನವದೆಹಲಿ: ಆಲ್ಕೋಹಾಲ್, ದರೋಡೆ, ಗನ್ ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರವು ಎಫ್‌ಎಂ ರೇಡಿಯೊ ಚಾನೆಲ್‌ಗಳಿಗೆ ಎಚ್ಚರಿಕೆ ನೀಡಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅನುಮತಿ ಒಪ್ಪಂದ (GOPA) ಮತ್ತು ಅನುಮತಿ ಒಪ್ಪಂದದ ವಲಸೆ ಅನುದಾನ (MGOPA) ನಲ್ಲಿ ಸೂಚಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸೂಚಿಸಿದ್ದು, ಯಾವುದೇ ವಿಷಯವನ್ನು ಉಲ್ಲಂಘಿಸಿ ಪ್ರಸಾರ ಮಾಡದಂತೆ ಸೂಚಿಸಿದೆ.

ಕೆಲವು ಎಫ್‌ಎಂ ಚಾನೆಲ್ ಗಳು ಆಲ್ಕೋಹಾಲ್, ಡ್ರಗ್ಸ್, ಶಸ್ತ್ರಾಸ್ತ್ರಗಳು, ದರೋಡೆಕೋರರು ಮತ್ತು ಬಂದೂಕು ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳನ್ನು ಅಥವಾ ವಿಷಯವನ್ನು ಪ್ರಸಾರ ಮಾಡುತ್ತಿವೆ ಎಂದು ತಿಳಿದುಬಂದ ನಂತರ ಸಚಿವಾಲಯವು ಈ ಸೂಚನೆಯನ್ನು ನೀಡಿದೆ.

ಆಲ್ಕೋಹಾಲ್, ಡ್ರಗ್ಸ್, ಶಸ್ತ್ರಾಸ್ತ್ರಗಳು, ದರೋಡೆಕೋರರು ಮತ್ತು ಬಂದೂಕು ಸಂಸ್ಕೃತಿಯನ್ನು ವೈಭವೀಕರಿಸುವುದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಹೇಳಿದೆ.

ಇನ್ನೂ ಸಾಕಷ್ಟು ಸಂಖ್ಯೆಯ ಹಾಡುಗಳು ಸದ್ಯ ಆಲ್ಕೋಹಾಲ್, ಡ್ರಗ್ಸ್, ಶಸ್ತ್ರಾಸ್ತ್ರಗಳು, ದರೋಡೆಕೋರರು ಮತ್ತು ಬಂದೂಕು ಮೊದಲಾದ ಸಂಸ್ಕೃತಿಗಳನ್ನು ವೈಭವೀಕರಿಸುತ್ತಿದೆ. ಸದ್ಯ ಅತ್ಯಂತ ಕಡಿಮೆ ಕೇಳುಗರನ್ನು ಹೊಂದಿರುವ AIR ಎಫ್ ಎಮ್ ರೇಡಿಯೋಗಳಿಗೆ ಮಾತ್ರವೇ ಈ ಸಲಹೆ, ಸೂಚನೆ ನೀಡಲಾಗಿದೆ. ಟಿವಿ, ಆನ್ ಲೈನ್ ಫ್ಲಾಟ್ ಫಾರಂಗಳಲ್ಲಿ ಈ ಮಾದರಿಯ ಹಾಡುಗಳನ್ನು ಹೆಚ್ಚಾಗಿ ಪ್ರಸಾರ ಮಾಡಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ