ಬಂಡೀಪುರ ಟೂ ಸತ್ಪುರ...  | ಹೊರರಾಜ್ಯಕ್ಕೆ ತೆರಳಿದ ನಾಲ್ಕು ಗಜಗಳು - Mahanayaka

ಬಂಡೀಪುರ ಟೂ ಸತ್ಪುರ…  | ಹೊರರಾಜ್ಯಕ್ಕೆ ತೆರಳಿದ ನಾಲ್ಕು ಗಜಗಳು

chamarajanagara
03/12/2022


Provided by

ಚಾಮರಾಜನಗರ:  ಗುಂಡ್ಲುಪೇಟೆ ತಾಲೂಕಿನ  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದಿಂದ 4 ಸಾಕಾನೆಗಳನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದ ಮೇರೆಗೆ ಮಧ್ಯಪ್ರದೇಶಕ್ಕೆ ಹಸ್ತಾಂತರಿಸಲಾಗಿದೆ.

ರಾಂಪುರ ಸಾಕಾನೆ ಶಿಬಿರದ ಕೃಷ್ಣ, ಗಜ, ಮರ್ಷಿಹ ಮತ್ತು ಪೂಜಾ ಎಂಬ 4 ಆನೆಗಳನ್ನು ರವಾನಿಸಲಾಗಿದೆ. ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 5 ಸಾಕಾನೆಗಳನ್ನು ಕಳುಹಿಸಲು ಚಿಂತಿಸಲಾಗಿತ್ತು. ಆದರೆ ಗಣೇಶ ಆನೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ಇದೀಗ ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ಒಟ್ಟು 4 ಆನೆಗಳನ್ನು ರವಾನಿಸಲಾಗಿದೆ. ಕಳೆದ ತಿಂಗಳು ನಿಸರ್ಗ ಎಂಬ ಸಾಕಾನೆಯನ್ನು ಸಹ ರವಾನಿಸಲಾಗಿತ್ತು.

chamarajanagara

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದ ಹೊರಟ 4 ಸಾಕಾನೆಗಳನ್ನು ಪಶು ವೈದ್ಯಾಧಿಕಾರಿಗಳು ತಪಾಸಣೆ ಒಳಪಡಿಸಿದ್ದು, ನಾಲ್ಕು ಕೂಡ ಆರೋಗ್ಯವಾಗಿದೆ ಎಂದು ದೃಢಪಡಿಸಲಾಗಿದೆ. ಮಧ್ಯಪ್ರದೇಶದ ಭೂಪಾಲ್‍ನಿಂದ ನೇಮಕಗೊಂಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ಕೋಬ್ರಾಗಡೆ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ