ಸ್ನೇಹಿತರ ಜೊತೆಗೆ ಫಾಲ್ಸ್ ನಲ್ಲಿ ಸ್ನಾನಕ್ಕೆ ಇಳಿದಿದ್ದ ವಿದ್ಯಾರ್ಥಿಯ ದುರಂತ ಸಾವು - Mahanayaka
12:38 AM Saturday 6 - December 2025

ಸ್ನೇಹಿತರ ಜೊತೆಗೆ ಫಾಲ್ಸ್ ನಲ್ಲಿ ಸ್ನಾನಕ್ಕೆ ಇಳಿದಿದ್ದ ವಿದ್ಯಾರ್ಥಿಯ ದುರಂತ ಸಾವು

belthangady
04/12/2022

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್  ಸಮೀಪದ ಏಳೂವರೆ ಹಳ್ಳದ ಕಲ್ಲಂಡ ಎಂಬಲ್ಲಿ  ಸ್ನಾನಕ್ಕೆ ಇಳಿದಿದ್ದ ‌ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ  ನಡೆದಿದೆ.

ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ ಉಜಿರೆಯ ಖಾಸಗಿ  ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿವೇಕ್ (17) ಈ ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಯಾಗಿದ್ದಾರೆ.

ಶನಿವಾರ ಮಧ್ಯಾಹ್ನ ನಂತರ ಕಾಲೇಜಿಗೆ ರಜೆ ಇದ್ದುದರಿಂದ ತನ್ನ ಆರೇಳು ಮಂದಿ ಸ್ನೇಹಿತರ ಜತೆ ಎರ್ಮಾಯಿ ಫಾಲ್ಸ್ ಗೆ‌ ಹೋಗಿ,ತೊಟ್ಲಾಯಿ ಗುಂಡಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಸಮಯ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಕಲ್ಲಂಡ ಪರಿಸರದ ತೊಟ್ಲಾಯಿ ಗುಂಡಿಯಲ್ಲಿ ಫಾಲ್ಸ್ ಗೆ ಬರುವ ಮಂದಿ ಸ್ನಾನಕ್ಕೆ ಇಳಿಯುವುದು ಸಾಮಾನ್ಯ. ಅದೇ ರೀತಿಯಾಗಿ ಇವರೂ ಸ್ನಾನಕ್ಕೆ ಇಳಿದಿದ್ದು ಈತ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಆಳವಾದ ಹೊಂಡದಲ್ಲಿ ಸಿಲುಕಿದ್ದಾನೆ ಅವರೊಂದಿಗಿದ್ದವರು ಬೊಬ್ಬೆ ಹೊಡೆದು ಸಹಾಯಕ್ಕಾಗಿ ಯಾಚಿಸಿದ್ದು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ನೀರಿಗೆ ಇಳಿದು ಆತನ್ನು ನೀರಿನಿಂದ ಮೇಲೆತ್ತಿದರು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತಂದರೂ ಆ ವೇಳೆಗೆ ಆತ ಮೃತಪಟ್ಟಿದ್ದ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ