ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ: ಹಿಮಾಚಲ ಪ್ರದೇಶದಲ್ಲಿ ಹಾವು ಏಣಿಯಾಟ! - Mahanayaka

ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ: ಹಿಮಾಚಲ ಪ್ರದೇಶದಲ್ಲಿ ಹಾವು ಏಣಿಯಾಟ!

election results
08/12/2022


Provided by

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಗುಜರಾತ್‌ ನಲ್ಲಿ ಬಿಜೆಪಿ 157 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 16 ಮತ್ತು ಎಎಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ 30ರಲ್ಲಿ ಮುನ್ನಡೆ ಸಾಧಿಸಿದರೆ, ಆಡಳಿತಾರೂಢ ಬಿಜೆಪಿ 30, ಸ್ವತಂತ್ರ ಅಭ್ಯರ್ಥಿಗಳು ಐದರಲ್ಲಿ ಮುಂದಿದ್ದಾರೆ. ಆಮ್ ಆದ್ಮಿ ಪಕ್ಷ ಇನ್ನೂ ತನ್ನ ಖಾತೆಯನ್ನು ತೆರೆದಿಲ್ಲ.

ಹಿಮಾಚಲ ಪ್ರದೇಶದಲ್ಲಿ ಹಾವು, ಏಣಿ ಆಟ ಆರಂಭವಾಗಿದ್ದು ಪಕ್ಷೇತರರು ನಿರ್ಣಾಯಕ ಸ್ಥಾನ ವಹಿಸುವ ಸಾಧ್ಯತೆಯಿದೆ. ಮತ ಎಣಿಕೆಯ ಆರಂಭದಿಂದ ಬೆಳಗ್ಗೆ 10:45ರವರೆಗೂ ಯಾವುದೇ ಪಕ್ಷಕ್ಕೆ ಸ್ಪಷ್ಟವಾದ ಮುನ್ನಡೆ ಸಿಕ್ಕಿಲ್ಲ. ಒಂದು ಬಾರಿ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್‌ಮುನ್ನಡೆ ಸಾಧಿಸುತ್ತಿದೆ.

ಸದ್ಯ ಬಿಜೆಪಿ 32, ಕಾಂಗ್ರೆಸ್‌ 33 ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಹಿಮಾಚಲದಲ್ಲಿ ಒಟ್ಟು 68 ಕ್ಷೇತ್ರಗಳಿದ್ದು ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ