ನ್ಯೂಜಿಲೆಂಡ್‌’ನಲ್ಲಿ ನಡೆದ ಕಾಮನ್‌ ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ ಪ್ರಶಸ್ತಿ ಗೆದ್ದ ಉಡುಪಿಯ ಪ್ರತೀಕ್ಷಾ - Mahanayaka
4:47 AM Saturday 8 - November 2025

ನ್ಯೂಜಿಲೆಂಡ್‌’ನಲ್ಲಿ ನಡೆದ ಕಾಮನ್‌ ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ ಪ್ರಶಸ್ತಿ ಗೆದ್ದ ಉಡುಪಿಯ ಪ್ರತೀಕ್ಷಾ

prathiksha
08/12/2022

ಉಡುಪಿ: ನ್ಯೂಜಿಲೆಂಡ್‌ ನ ಆಕ್ಲೆಂಡ್‌ ನಲ್ಲಿ ಈಚೆಗೆ ನಡೆದ ಕಾಮನ್‌ ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ ನಲ್ಲಿ ಉಡುಪಿಯ ಡಾ.ಜಿ.ಶಂಕರ್‌ ಸರ್ಕಾರಿ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಮಹಿಳೆಯರ ಜೂನಿಯರ್‌ 84 ಕೆ.ಜಿ ವಿಭಾಗದಲ್ಲಿ ಎಕ್ವಿಪ್ಟ್‌ ಪವರ್‌ ಲಿಫ್ಟಿಂಗ್‌ನಲ್ಲಿ ಪ್ರಥಮ ಸ್ಥಾನ, ಸ್ಕ್ವಾಟ್‌ನಲ್ಲಿ 193 ಕೆ.ಜಿ ಭಾರ ಎತ್ತುವ ಮೂಲಕ ಕೂಟ ದಾಖಲೆ ನಿರ್ಮಿಸಿದ್ದಾರೆ. ಇಕ್ವಿಪ್ಟ್‌ ಹಾಗೂ ಅನ್‌ ಎಕ್ವಿಪ್ಟ್‌ ಬೆಚ್‌ಪ್ರೆಸ್‌ ಸ್ಪರ್ಧೆಯಲ್ಲಿ ಬಂಗಾರದ ಪದಕದ ಜತೆಗೆ ಬಲಶಾಲಿ ಮಹಿಳೆ ಎಂಬ ಟೈಟಲ್ ದೊರೆಯಿತು ಎಂದು ಪ್ರತೀಕ್ಷಾ ತಿಳಿಸಿದರು.

ಈ ಸಾಧನೆಗೆ ಪೋಷಕರು, ಕೋಚ್‌, ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡೆ ಹಾಗೂ ಯುವ ಸಬಲೀಕರಣ ಇಲಾಖೆ ಉಪ ನಿರ್ದೇಶಕರು ಹಾಗೂ ಸಿಬ್ಬಂದಿ ಪ್ರೋತ್ಸಾಹ ಕಾರಣ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ