ಹಿಮಾಚಲಪ್ರದೇಶದ ಗೆಲುವಿನ ನಡುವೆಯೇ ಖರ್ಗೆ ಮುಂದಿದೆ ಆಪರೇಷನ್ ಕಮಲ ತಡೆಯುವ ಸವಾಲು - Mahanayaka

ಹಿಮಾಚಲಪ್ರದೇಶದ ಗೆಲುವಿನ ನಡುವೆಯೇ ಖರ್ಗೆ ಮುಂದಿದೆ ಆಪರೇಷನ್ ಕಮಲ ತಡೆಯುವ ಸವಾಲು

mallikarjun kharge, sonia gandhi
09/12/2022


Provided by

ಪ್ರಜ್ಞಾವಂತ ಮತದಾರರು ಅಂತನೇ ಗುರುತಿಸಿಕೊಂಡಿರುವ ಹಿಮಾಚಲ ಪ್ರದೇಶ ಈವರೆಗೆ ಯಾರಿಗೂ ಎರಡನೇ ಬಾರಿಗೆ ಅಧಿಕಾರ ನೀಡಿಲ್ಲ. ಆದರೆ, ಇದೀಗ ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಎರಡನೇ ಬಾರಿಗೆ ಗೆಲುವು ದಾಖಲಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗುಜರಾತ್ ನ ಹೀನಾಯ ಸೋಲು ಹಾಗೂ ಹಿಮಾಚಲ ಪ್ರದೇಶದ ಗೆಲುವುದು ಸಮಾನವಾಗಿ ಸ್ವೀಕರಿಸುವ ಪರಿಸ್ಥಿತಿ ಬಂದೊದಗಿದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದರೂ, ಆಪರೇಷನ್ ಕಮಲ ಭೀತಿ ಕಾಂಗ್ರೆಸ್ ನ್ನು ಕಾಡಿದೆ. ನೂತನ ಅಧ್ಯಕರಾಗಿ ಆಯ್ಕೆಯಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪರೇಷನ್ ಕಮಲವನ್ನು ತಡೆಯುವ ಹೊಸ ಸವಾಲು ಎದುರಾಗಿದೆ.

ಗಾಂಧಿ ಕುಟುಂಬದ ಅಧೀನದಲ್ಲಿದ್ದ ಪಕ್ಷದ ಅಧ್ಯಕ್ಷ ಸ್ಥಾನ ದಲಿತರೊಬ್ಬರ ಕೈಗೆ ಬರುತ್ತಿದ್ದಂತೆಯೇ, ಮತದಾರರ ವಿಶ್ವಾಸ ಕಾಂಗ್ರೆಸ್ ಕಡೆಗೆ ವಾಲುತ್ತಿರುವುದು ಕೂಡ ಸ್ಪಷ್ಟವಾಗಿ ಗೋಚರವಾಗುತ್ತಿದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿದೆ.  ಹಿಮಾಚಲ ಪ್ರದೇಶದ 68 ಕ್ಷೇತ್ರಗಳಲ್ಲಿ ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಈ ಮೂಲಕ ಸ್ಪಷ್ಟ ಬಹುಮತವನ್ನು ದಾಖಲಿಸಿದೆ.

ಹಿಮಾಚಲ ಪ್ರದೇಶದಲ್ಲಿ ಸ್ಪಷ್ಟ ಬಹುಮತಗಳಿಸುತ್ತಿದ್ದಂತೆಯೇ ಕಾಂಗ್ರೆಸ್ ತಕ್ಷಣದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದು, ತನ್ನ ಶಾಸಕರನ್ನು ಛತ್ತೀಸ್ ಗಢಕ್ಕೆ ಶಿಫ್ಟ್ ಮಾಡಿದೆ. ಆಪರೇಷನ್ ಕಮಲದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಹಲವು ರಾಜ್ಯಗಳಲ್ಲಿ ಆದ ನಷ್ಟದಿಂದ ಕಾಂಗ್ರೆಸ್ ಪಾಠ ಕಲಿತಂತಿದೆ. ಈ ನಡುವೆ ನೂತನ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪರೇಷನ್ ಕಮಲ ತಡೆಯುವ ಹೊಸ ಸವಾಲು ಎದುರಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ