ಅಂಗಡಿ ಕೆಡವಲು ಬಂದ ಪೊಲೀಸ್ ಗೆ ಈ ಮಹಿಳೆ ಏನು ಮಾಡಿದ್ದಾಳೆ ನೋಡಿ! - Mahanayaka
5:31 PM Wednesday 20 - August 2025

ಅಂಗಡಿ ಕೆಡವಲು ಬಂದ ಪೊಲೀಸ್ ಗೆ ಈ ಮಹಿಳೆ ಏನು ಮಾಡಿದ್ದಾಳೆ ನೋಡಿ!

24/12/2020


Provided by

ಪಾಟ್ನಾ: ಅಂಗಡಿ ಕೆಡವಲು ಬಂದ ಪೊಲೀಸ್ ಅಧಿಕಾರಿಯ ಮುಖಕ್ಕೆ ಮಹಿಳೆಯೊಬ್ಬರು ಕುದಿಯುತ್ತಿರುವ ಚಹಾವನ್ನು ಎರಚಿದ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದ್ದು, ಮಹಿಳೆಯು ಅಕ್ರಮ ಅಂಗಡಿಯನ್ನು ಹಾಕಿರುವ ಹಿನ್ನೆಲೆಯಲ್ಲಿ ತೆರವಿಗೆ ಹೋದ ಸಂದರ್ಭದಲ್ಲಿ ಕೋಪಗೊಂಡ ಮಹಿಳೆ ಈ ಕೃತ್ಯ ನಡೆದಿದ್ದಾಳೆ ಎಂದು ವರದಿಯಾಗಿದೆ.

ಈ ಘಟನೆಯು ಸೋಮವಾರ ನಡೆದಿದ್ದು, ಅತಿಕ್ರಮಣ ಸ್ಥಳಾಂತರ ಮಾಡಲು ಬಂದ ಶ್ರೀಕೃಷ್ಣ ಎಂಬ ಪೊಲೀಸ್ ಅಧಿಕಾರಿಯ ಮೇಲೆ ಈ ದಾಳಿ ನಡೆದಿದೆ. ಸರಿತಾ ದೇವಿ ಎಂಬ ಮಹಿಳೆ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.  ಪೊಲೀಸ್ ಅಧಿಕಾರಿ ಮಹಿಳೆಯ ಅಂಗಡಿ ತೆರವಿಗೆ ಮುಂದಾದಾಗ ಮಹಿಳೆಯ ಜೊತೆಗೆ ತೀವ್ರ ವಾಗ್ದಾದ ನಡೆದಿದೆ. ಈ ಸಂದರ್ಭ ವಾಗ್ವಾದ ತಾರಕಕ್ಕೇರಿದ್ದು, ತಾಳ್ಮೆ ಕಳೆದುಕೊಂಡ ಮಹಿಳೆ ಪೊಲೀಸ್ ಅಧಿಕಾರಿಯ ಮುಖಕ್ಕೆ ಕುದಿಯುತ್ತಿರುವ ಚಹಾ ಎರಚಿದ್ದಾಳೆ.

ಚಹಾ ಮುಖಕ್ಕೆ ಎರಚಿದ ಪರಿಣಾಮ ಗಂಭೀರಗೊಂಡ ಪೊಲೀಸ್ ಅಧಿಕಾರಿಯನ್ನು ತಕ್ಷಣವೇ  ಸಮೀಪದ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ವಾಟ್ನಾದ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

ಇತ್ತೀಚಿನ ಸುದ್ದಿ