ಕಾಡುಪಾಪಗಳ ಸಾಗಿಸುತ್ತಿದ್ದ ಇಬ್ಬರ ಬಂಧನ: ಮೂಕಪ್ರಾಣಿಗಳ ರಕ್ಷಣೆ
ಚಾಮರಾಜನಗರ: ಕಾಡುಪಾಪಗಳನ್ನು ಸಾಗಿಸುತ್ತಿದ್ದಾಗ ಇಬ್ಬರು ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ ನಡೆದಿದೆ.
ಹನೂರು ತಾಲೂಕಿನ ವೀರಭದ್ರಪ್ಪ (58) ಹಾಗೂ ಮೈಸೂರಿನ ದೊಡ್ಡಕಾನ್ಯ ಗ್ರಾಮದ ಪಿ.ರಾಜು(45) ಬಂಧಿತ ಆರೋಪಿಗಳು. ಕಾಡುಪಾಪಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿದಳ ಪೊಲೀಸರು ದಾಳಿ ನಡೆಸಿ ಇವರಿಬ್ಬರನ್ನು ಬಂಧಿಸಿ ಮೂಕ ಪ್ರಾಣಿಗಳನ್ನು ರಕ್ಷಿಸಿದ್ದಾರೆ.
ಮಲೈಮಹದೇಶ್ವರ ವನ್ಯಜೀವಿ ವಿಭಾಗದಿಂದ ಈ ಪ್ರಾಣಿಗಳನ್ನು ಹನುರು ತಾಲೂಕಿನ ಆನೆಹೊಲ ನಿವಾಸಿ ಮಹದೇವ ಎಂಬಾತ ಸೆರೆಹಿಡಿದು ಇವರಿಗೆ ಕೊಟ್ಟಿದ್ದ ಎಂದು ತಿಳಿದುಬಂದಿದೆ. ಮಹಾದೇವನ ಪತ್ತೆಗೆ ಬಲೆ ಬೀಸಿದ್ದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























