ಪಠಾಣ್ ಚಿತ್ರದ ಹಾಡಿನ ವಿವಾದದ ನಡುವೇ ಸ್ಮೃತಿ ಇರಾನಿ ಅವರ ಮಿಸ್ ಇಂಡಿಯಾ ವಿಡಿಯೋ ವೈರಲ್! - Mahanayaka
9:42 AM Saturday 6 - December 2025

ಪಠಾಣ್ ಚಿತ್ರದ ಹಾಡಿನ ವಿವಾದದ ನಡುವೇ ಸ್ಮೃತಿ ಇರಾನಿ ಅವರ ಮಿಸ್ ಇಂಡಿಯಾ ವಿಡಿಯೋ ವೈರಲ್!

smruti irani
16/12/2022

ನವದೆಹಲಿ: ಪಠಾಣ್ ಚಿತ್ರದ ಹಾಡಿನಲ್ಲಿ ಕೇಸರಿ ವಸ್ತ್ರ ಧರಿಸಲಾಗಿದೆ ಅನ್ನೋ ವಿವಾದದ ನಡುವೆಯೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ  ಸ್ಮೃತಿ ಇರಾನಿ ಅವರ ವಿಡಿಯೋವೊಂದು ವೈರಲ್ ಆಗಿದೆ.

1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ಬಣ್ಣದ ತುಂಡುಡುಗೆ ಉಟ್ಟು ಸ್ಪರ್ಧಿಸಿರುವುದನ್ನು ಇದೀಗ ಪ್ರಶ್ನಿಸಲಾಗುತ್ತಿದೆ. ದೀಪಿಕಾ ಪಡುಕೋಣೆ ಕೇಸರಿ ವಸ್ತ್ರ ಧರಿದ್ರೆ ತಪ್ಪು, ಅದೇ ಸ್ಮೃತಿ ಇರಾನಿ ಧರಿಸಿದ್ರೆ ಸರಿ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕ ರಿಜು ದತ್ತಾ ಅವರು ಬಿಜೆಪಿಯ ಅಮಿತ್ ಮಾಳವಿಯಾ ಅವರ ಟ್ವೀಟ್ ಗೆ ಈಜು ಉಡುಗೆ ಸುತ್ತಿನ ಸ್ಪರ್ಧೆಯ ವಿಡಿಯೋವನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ.

ಪಠಾಣ್ ಹಾಡು ವಿವಾದಕ್ಕೀಡಾಗುತ್ತಿದ್ದಂತೆಯೇ ಅಕ್ಷಯ್ ಕುಮಾರ್ ಅವರ ಚಿತ್ರದ ದೃಶ್ಯಗಳು ಕೂಡ ವೈರಲ್ ಆಗಿದ್ದು, ಅಕ್ಷಯ್ ಕುಮಾರ್ ಕೇಸರಿ ಧರಿಸಿದ ಹುಡುಗಿಯ ಜೊತೆಗೆ ರೊಮ್ಯಾಂಟಿಕ್ ಹಾಡಿಗೆ ಡಾನ್ಸ್ ಮಾಡಿದ್ರೆ, ಧರ್ಮ ದ್ರೋಹ ಆಗಲ್ವಾ ಅಂತ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ ಬಾಬಾ ರಾವ್ ದೇವ್ ಅವರನ ಚಿತ್ರವನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗಿದ್ದು, ಕೇಸರಿ ಕಚ್ಚೆ ಧರಿಸಿ ಇವರು ಮಾಡುತ್ತಿರುವ ಭಂಗಿಗಳು ಸರಿಯೇ ಅನ್ನೋ ಪ್ರಶ್ನೆಗಳನ್ನು ಕೇಳಿದ್ದಾರೆ. ಒಟ್ಟಿನಲ್ಲಿ ಪಠಾಣ್ ಚಿತ್ರದ ಹಾಡಿನ ವಿವಾದ ಅಂತೂ ಸಧ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಸಾಕಷ್ಟು ಜನರು ಇದೊಂದು ವಿವಾದವೇ? ದೇಶದಲ್ಲಿ ಚರ್ಚಿಸಲು ಬೇರೇನೂ ಸಮಸ್ಯೆಗಳಿಲ್ಲವೇ? ಅನ್ನೂ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ