ಚಿಕ್ಕಮಗಳೂರು: 3 ಆನೆಗಳನ್ನು ಹಿಡಿದ ಬೆನ್ನಲ್ಲೇ ಕುಟುಂಬ ಸಮೇತವಾಗಿ ಎಂಟ್ರಿಕೊಟ್ಟ ಕಾಡಾನೆಗಳ ಹಿಂಡು - Mahanayaka
10:30 AM Saturday 6 - December 2025

ಚಿಕ್ಕಮಗಳೂರು: 3 ಆನೆಗಳನ್ನು ಹಿಡಿದ ಬೆನ್ನಲ್ಲೇ ಕುಟುಂಬ ಸಮೇತವಾಗಿ ಎಂಟ್ರಿಕೊಟ್ಟ ಕಾಡಾನೆಗಳ ಹಿಂಡು

elephant
17/12/2022

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮೂರು ಪುಂಡಾನೆಗಳನ್ನು ಅರಣ್ಯ ಇಲಾಖೆ ಹಿಡಿದ ಬೆನ್ನಲ್ಲೇ, ಇದೀಗ ಕುಟುಂಬ ಸಮೇತವಾಗಿ ಕಾಡಾನೆಗಳ ಹಿಂಡು ನಾಡಿಗೆ ಎಂಟ್ರಿಕೊಟ್ಟಿದ್ದು, ಕಳೆದ ಮೂರು ದಿನಗಳಿಂದ 8 ಕಾಡಾನೆಗಳು ರೌಂಡ್ಸ್ ಹೊಡೆಯುತ್ತಿವೆ.

ಮಲೆನಾಡಿನ ಬೆನ್ನಲ್ಲೇ ಬಯಲು ಸೀಮೆಯಲ್ಲಿ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು, ತರೀಕೆರೆ ತಾಲೂಕಿನ ಬೈರಾಪುರ, ನಂದಿಬಟ್ಲು, ಮಲ್ಲಿಗೆನಹಳ್ಳಿ, ಲಿಂಗದಹಳ್ಳಿ ಸುತ್ತಮುತ್ತ ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆಯೇ ಆನೆಗಳು ಓಡಾಟ ಆರಂಭಿಸುತ್ತಿದೆ.

ರೈತರ ಜಮೀನುಗಳಿಗೆ ಇಳಿದು ರಾಜಾರೋಷವಾಗಿ ಕಾಡಾನೆಗಳು ಸುತ್ತಾಡುತ್ತಿವೆ. ಉಡೇವಾ ಗ್ರಾಮದ ಸಮೀಪ ಕಾಡಾನೆಗಳು ಬೀಡು ಬಿಟ್ಟಿದ್ದು, ಪಟಾಕಿ ಸಿಡಿಸಿದಾಗ  ಗುಡ್ಡ—ಕಾಡಿನತ್ತ ಆನೆಗಳು ಸರಿಯುತ್ತಿವೆ. ಸಂಜೆಯಾಗುತ್ತಿದ್ದಂತೆಯೇ ಜಮೀನಿನಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ