ಶಾಲಾ ವಾಹನ ಡಿಕ್ಕಿ ಹೊಡೆದು ಗೂಡ್ಸ್ ವಾಹನದ ಚಾಲಕ ಸಾವು: ಇಬ್ಬರ ಸ್ಥಿತಿ ಗಂಭೀರ - Mahanayaka

ಶಾಲಾ ವಾಹನ ಡಿಕ್ಕಿ ಹೊಡೆದು ಗೂಡ್ಸ್ ವಾಹನದ ಚಾಲಕ ಸಾವು: ಇಬ್ಬರ ಸ್ಥಿತಿ ಗಂಭೀರ

belthangady
24/12/2022


Provided by

ಬೆಳ್ತಂಗಡಿ: ಕೊಯ್ಯೂರು ಮಲೆಬೆಟ್ಟು ಸಮೀಪ ಶಾಲಾ ವಾಹನ ಡಿಕ್ಕಿ ಹೊಡೆದು ಗೂಡ್ಸ್ ವಾಹನ ಚಾಲಕನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ

ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ರಝಾಕ್(50)  ಸಾವನ್ನಪ್ಪಿದವರು. ಇವರ ಗೂಡ್ಸ್ ರಿಕ್ಷಾಕ್ಕೆ ಶಾಲಾ ಮಕ್ಕಳ ಬಸ್ ಎದುರು ಬದುರಾಗಿ ಡಿಕ್ಕಿಹೊಡೆದಿದೆ.

ಹೊಡೆತದ ರಭಸಕ್ಕೆ ರಿಕ್ಷಾ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ರಿಕ್ಷಾದಲ್ಲಿದ್ದ ರಜಾಕ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಹನೀಫ್(48) , ಪಣಕಜೆ ನಿವಾಸಿ ಕೆ.ಮೊಹಮ್ಮದ್ (57)  ಎಂಬವರಿಗೆ ಗಂಭೀರ ಗಾಯಗಳಾಗಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ