ಬೆಳ್ತಂಗಡಿ: ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಒಂಟಿ ಸಲಗ - Mahanayaka

ಬೆಳ್ತಂಗಡಿ: ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಒಂಟಿ ಸಲಗ

belthangady
03/01/2023


Provided by

ಬೆಳ್ತಂಗಡಿ: ಒಂಟಿ ಸಲಗವೊಂದು ಮಂಗಳವಾರ ಬೆಳಿಗ್ಗೆ ಪಟ್ರಮೆ ಸೇತುವೆ ಸಮೀಪ ಜನವಸತಿ ಪ್ರದೇಶದ ನಡುವೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಸೇತುವೆ ಸಮೀಪ ಆನೆಯ ಇರುವಿಕೆಯನ್ನು ಜನರು ಗುರುತಿಸಿದ್ದಾರೆ ಜನರು ಸೇರುವುದನ್ನು ನೋಡಿ ಕಾಡಾನೆ ಮಸೀದಿ ಬಳಿಯಿಂದ ಅಲ್ಲಿಯೇ ಸಮೀಪದ ಶ್ಯಾಮ್ ಪ್ರಸಾದ್ ಎಂಬವರ ತೋಟಕ್ಕೆ ನುಗ್ಗಿದೆ ಅಲ್ಲಿಂದ ನದಿ ದಾಟಿ ಮುಂದೆ ಹೋಗಿದೆ.

ಜನವಸತಿ ಪ್ರದೇಶದ ನಡುವೆಯೇ ಕಾಡಾನೆ ಓಡಾಡುತ್ತಿರುವುದು ಜನರಲ್ಲಿ ಅತಂಕ ಹೆಚ್ಚಾಗಲು ಕಾರಣವಾಗಿದೆ. ಇದೆ ಒಂಟಿಸಲಗ ವಾರದ ಹಿಂದೆ ನೆರಿಯ ಶಿಬಾಜೆ ಪರಿಸರದಲ್ಲಿ ಕಾಣಿಸಿಕೊಂಡಿತ್ತು. ಗುಡ್ಯದಲ್ಲಿ ವ್ಯಕ್ತಿಯನ್ನು ಕೊಲೆಮಾಡುದ ಒಂಟಿಸಲಗ ಇದೇ ಆಗಿರಬಹುದು ಎಂಬ ಅನುಮಾನ ಸ್ಥಳೀಯರದ್ದಾಗಿದೆ.

ಜನರ ಮೇಲೆ ದಾಳಿ ನಡೆಸಿದ ಒಂಟಿ ಸಲಗ ಇನ್ನಷ್ಟು ಅಕ್ರಮಣಕಾರಿಯಾಗಿ ಮಾರ್ಪಡಬಹುದು ಎಂಬುದು ಇಲ್ಲಿನ ಜನರ ಭಯವಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಇದೀಗ ಒಂದೆಡೆ ಒಂಟಿ ಸಲಗನ ಭಯವಾದರೆ ಮತ್ತೊಂದೆಡೆ ಕಾಡಾನೆಗಳ ಹಿಂಡೊಂದು ಮುಂಡಾಜೆ ಪರಿಸರದಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡುತ್ತಿದೆ.

ಕಾಡಾನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಹೇಳುತ್ತಿದ್ದರೂ ದಿನ ಕಳೆದಂತೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಲೇ ಇದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ