ವಿಡಿಯೋ, ಆಡಿಯೋ ಒಪ್ಪಿಸಲು ಸಿದ್ಧನಿದ್ದೇನೆ: ಅಣ್ಣಾಮಲೈ ವಿರುದ್ಧ ಗಾಯತ್ರಿ ಗಂಭೀರ ಆರೋಪ

ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ಗಾಯತ್ರಿ ರಘುರಾಮ್ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರು ಟ್ವೀಟ್ ಸಮರವನ್ನು ಮುಂದುವರಿಸಿದ್ದಾರೆ.
ಮಹಿಳೆಯರಿಗೆ ಪಕ್ಷದಲ್ಲಿ ಸುರಕ್ಷತೆ ಇಲ್ಲ ಎಂಬ ಕಾರಣ ನೀಡಿ ರಾಜೀನಾಮೆ ನೀಡಿದ್ದ ಗಾಯತ್ರಿ ರಘುರಾಮ್ ತಮಿಳುನಾಡು ಬಿಜೆಪಿ ಹಾಗೂ ಅಣ್ಣಾಮಲೈ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ಅಣ್ಣಾಮಲೈ ಅವರನ್ನು ಮತ್ತಷ್ಟು ತನಿಖೆ ಮಾಡಲು ಎಲ್ಲ ವಿಡಿಯೋ ಮತ್ತು ಆಡಿಯೋಗಳನ್ನು ಒಪ್ಪಿಸಲು ನಾನು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಸಿದ್ಧನಿದ್ದೇನೆ ಎಂದು ಅವರು ಬಾಂಬ್ ಸಿಡಿಸಿದ್ದು, ಅಣ್ಣಾಮಲೈ ಓರ್ವ ಅನಾರೋಗ್ಯದ ವ್ಯಕ್ತಿ ಮತ್ತು ನನಗೆ ತುಂಬಾ ತೊಂದರೆಯನ್ನು ನೀಡಿದ್ದಾರೆ ಎಂದು ಗಾಯತ್ರಿ ದೂರಿದ್ದಾರೆ.
ಅಣ್ಣಾಮಲೈ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿರುವ ‘ಮನಸ್ಸೆಲ್ಲ ನೀನೆ’ ಸಿನಿಮಾ ಖ್ಯಾತಿಯ ನಟಿ ಗಾಯತ್ರಿ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka