ನಾಯಿಯನ್ನು ಹುಲಿ ಮಾಡಿದ ರೈತ: ಹುಲಿ ರೂಪದ ನಾಯಿಯನ್ನು ಕಂಡು ಹೆದರಿ ಓಡುತ್ತಿರುವ ಜನ - Mahanayaka
10:40 PM Thursday 21 - August 2025

ನಾಯಿಯನ್ನು ಹುಲಿ ಮಾಡಿದ ರೈತ: ಹುಲಿ ರೂಪದ ನಾಯಿಯನ್ನು ಕಂಡು ಹೆದರಿ ಓಡುತ್ತಿರುವ ಜನ

tiger
11/01/2023


Provided by

ಚಾಮರಾಜನಗರ: ಹುಲಿ ಹಾಗೂ ಸಿಂಹ ಎರಡೂ ಹೆಸರುಗಳ ಮಿಶ್ರಣದಿಂದ ಲೈಗರ್ ಎಂಬ ಪದ ಹುಟ್ಟಿದ್ದು ನಿಮಗೆ ಗೊತ್ತೇ ಇದೆ. ಅದೇ ರೀರಿ, ಇಲ್ಲೊಂದು ನಾಯಿ ಡೈಗರ್ ಆಗಿದೆ. ಆದರೆ, ಇದ್ಯಾವುದು ಸಿನಿಮಾ ಕಥೆಯಲ್ಲ ರೈತನ ಕತೆ.

ಹೌದು…, ಹನೂರು ತಾಲೂಕಿನ  ಅಜ್ಜೀಪುರ ಗ್ರಾಮದಲ್ಲಿ ಹುಲಿ ವೇಷಧಾರಿ ನಾಯಿಯೊಂದು ಓಡಾಡುತ್ತಿದ್ದು ಅನಾಮಿಕ ರೈತನ ಕೈ ಚಳಕ ಎಂದು ತಿಳಿದುಬಂದಿದೆ.  ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮನುಷ್ಯನ ಗೊಂಬೆ, ಲೌಡ್ ಸ್ಪೀಕರ್, ಜಾಗಟೆ-ಗಂಟೆ, ತೆಂಗಿನ ಮರಗಳಿಗೆ ತಗಡು ಬಡಿಯುವುದನ್ನೆಲ್ಲಾ ಮಾಡಿ  ನೋಡಿದ ರೈತರು ಈಗ ಹುಲಿಯಂತ ನಾಯಿಯನ್ನೇ ಕರೆತಂದಿದ್ದಾರೆ‌.

ಈ ವಿಲಕ್ಷಣ ಐಡಿಯಾದಿಂದ ವನ್ಯಜೀವಿಗಳು, ಮಂಗಗಳು  ಹೆದರುತ್ತವೆಯೋ ಗೊತ್ತಿಲ್ಲ. ಆದರೆ, ವಾಹನ ಸವಾರರಂತೂ ಬೆಚ್ಚಿ ಬೀಳುತ್ತಿದ್ದಾರೆ. ಅಜ್ಜೀಪುರ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದು ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ದುತ್ತನೇ ಎದುರಾಗುವ ಈ ಡೈಗರ್ ಕಂಡು ಹೌಹಾರುತ್ತಿದ್ದಾರೆ‌.

ನಾಯಿಗೆ ಹುಲಿ ರೂಪದ ಬಣ್ಣ ಬಳಿದಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ದಾರಿಹೋಕರು ಹುಲಿ ರೂಪದ ನಾಯಿಯನ್ನು ನೋಡಿ ಭಯ ಬೀಳುವುದರ ಜೊತೆಗೆ ವಿಚಲಿತರಾಗುತ್ತಿದ್ದಾರೆ.  ಇದು ದಿಟವಾದ ವ್ಯಾಘ್ರವಲ್ಲ ಎಂದು ಅರಿಯುತ್ತಿದ್ದಂತೆ ಬದುಕಿದೆಯಾ ಬಡ ಜೀವವೇ  ಎಂಬಂತೆ ನಿಟ್ಟುಸಿರು ಬಿಡುತ್ತಾ ಶಪಿಸುತ್ತಿದ್ದು ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಈ ಗ್ರಾಮದಲ್ಲಿ ಡೈಗರ್ ಹವಾ ಸೃಷ್ಟಿಸಿದೆ.

ಇನ್ನು, ಹುಲಿಯಂತ ನಾಯಿ ಕಂಡು ಕೋತಿಗಳು, ಪಕ್ಷಿಗಳು ಓಟ ಕೀಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದ್ದು ಒಂದು ವೇಳೆ ಯಶ ಕಂಡರೇ ರೈತನ ಐಡಿಯಾ ಬೇರೆ ಊರಿಗೂ ಹೋಗಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ