ಕಾಲೇಜಿನಿಂದ ಅನುಮತಿ ಪಡೆದು ಹೊರಹೋಗಿದ್ದ ಯುವತಿ ನಾಪತ್ತೆ! - Mahanayaka
10:40 PM Sunday 7 - September 2025

ಕಾಲೇಜಿನಿಂದ ಅನುಮತಿ ಪಡೆದು ಹೊರಹೋಗಿದ್ದ ಯುವತಿ ನಾಪತ್ತೆ!

riona
15/01/2023

ಉಡುಪಿಯ ಕಾಲೇಜೊಂದರಿಂದ ಅನುಮತಿ ಪಡೆದು ಹೊರ ಹೋದ ಯುವತಿಯೊಬ್ಬಳು, ಬಳಿಕ‌ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Provided by

ಕಾಣೆಯಾದ ಯುವತಿಯನ್ನು ಪಡುಬೆಳ್ಳೆ ನಿವಾಸಿ ಸ್ಟೀಫನ್ ಅಮ್ಮನ್ ಅವರ ಪುತ್ರಿ 20ವರ್ಷದ ರಿಯೋನಾ ಅಮ್ಮನ್ನ ಎಂದು ಗುರುತಿಸಲಾಗಿದೆ. ಈಕೆ ಎಂದಿನಂತೆ ಜನವರಿ 13 ರಂದು ಉಡುಪಿಯ ಕಾಲೇಜಿಗೆ‌ ಹೋಗಿದ್ದು, ಮಧ್ಯಾಹ್ನ ಅನುಮತಿ ಪಡೆದು ಹೊರ ಹೋಗಿದ್ದಾಳೆ. ಆ ಬಳಿಕ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ಆಕೆಯ ತಾಯಿ ರೀಟಾ ಅಮ್ಮನ್ನ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಿಯೋನಾ ಅಮ್ಮನ್ನ 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾಳೆ. ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದಿದ್ದಾಳೆ. ಈಕೆ ಕನ್ನಡ, ಇಂಗ್ಲೀಷ್, ತುಳು ಭಾಷೆ ಮಾತನಾಡುತ್ತಿದ್ದು, ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಉಡುಪಿ ನಗರ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ