ಮನೆ ಕೊಟ್ಟು, ನೀರು ಕೊಡದ ಅಧಿಕಾರಿಗಳು: ನೆರೆಸಂತ್ರಸ್ತರಿಗೆ ತಪ್ಪದ ಭವಣೆ - Mahanayaka
6:18 AM Wednesday 5 - November 2025

ಮನೆ ಕೊಟ್ಟು, ನೀರು ಕೊಡದ ಅಧಿಕಾರಿಗಳು: ನೆರೆಸಂತ್ರಸ್ತರಿಗೆ ತಪ್ಪದ ಭವಣೆ

chikkamagaluru
17/01/2023

ಕೊಟ್ಟಿಗೆಹಾರ: 2019ರ ನೆರೆ ಪ್ರವಾಹದಿಂದ‌ ನಿರಾಶ್ರಿತರಾದ ನೆರೆ ಸಂತ್ರಸ್ತರಿಗೆ ಬಿ ಹೊಸಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಣ್ಣದಗೂಡಿನಲ್ಲಿ ಪುನರ್ವಸತಿ ಕಲ್ಪಿಸಿದ್ದು , ಇಲ್ಲಿಗೆ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸದೇ ಇರುವುದು ನೆರೆ ಸಂತ್ರಸ್ತರು ಪರದಾಡುವಂತಾಗಿದೆ.

ನೀರು ಇಲ್ಲದೇ ತೊಂದರೆ ಅನುಭವಿಸುತ್ತಿರುವ ನೆರೆ ಸಂತ್ರಸ್ತರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಚರಂಡಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳು‌ಕೂಡ ಮರಿಚೀಕೆಯಾಗಿದ್ದು ಕೆಲ ದಿನಗಳ ಹಿಂದೆ ಬಾಲಕನೊಬ್ಬ ಬಿದ್ದು ಗಾಯ ಮಾಡಿಕೊಂಡ ಘಟನೆಯೂ ನಡೆದಿದೆ.

ನೆರೆಯಿಂದ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಮನೆ ಸಿಕ್ಕರೂ ಸಮಸ್ಯೆಗಳು ಮುಗಿಯದಂತಾಗಿದೆ. ಸರ್ಕಾರ, ಅಧಿಕಾರಿಗಳು ಕೂಡಲೇ ಮೂಲಭೂತ ಸೌಕರ್ಯ,ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವಾ ಅಗತ್ಯವಿದೆ.ಇಲ್ಲಿನ ನೆರೆ ಸಂತ್ರಸ್ತರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ