ಸಿದ್ದರಾಮಯ್ಯ ಗಂಟಲಿನಿಂದ ಮಾತಾಡ್ತಾರೆ: ಸಚಿವ ಸೋಮಣ್ಣ - Mahanayaka
7:35 AM Wednesday 20 - August 2025

ಸಿದ್ದರಾಮಯ್ಯ ಗಂಟಲಿನಿಂದ ಮಾತಾಡ್ತಾರೆ: ಸಚಿವ ಸೋಮಣ್ಣ

v somanna
26/01/2023


Provided by

ಚಾಮರಾಜನಗರ: ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಟಲಿನಿಂದ ಮಾತನಾಡುತ್ತಾರೆ ಹೃದಯದಿಂದಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು  ಆಲಿಬಾಬಾ ಮತ್ತು 40 ಕಳ್ಳರು ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿ, ತಾನು ಅವರ ಬಗ್ಗೆ ಹೆಚ್ಚು ಮಾತನಾಡಲ್ಲ, ಒಮ್ಮೆ ಶುರುವಾದರೇ ಅದು ಮತ್ತೆಲಿಗೋ ಹೋಗುತ್ತದೆ, ನನಗೆ ಈಗಲೂ ಕಾನ್ಫಿಡೆನ್ಸ್ ಇದೆ ಅವರು ಗಂಟಲಿನಿಂದ ಮಾತನಾಡುತ್ತಿದ್ದಾರೆ, ಹೃದಯದಿಂದಲ್ಲ ಎಂದು ಟಾಂಗ್ ಕೊಟ್ಟರು.

ಚುನಾವಣೆ ಬರುತ್ತೆ-ಹೋಗತ್ತೆ ಅವರು 70 ವರ್ಷ ಅಧಿಕಾರದಲ್ಲಿದ್ದರು, 5-10 ವರ್ಷದಿಂದ ನಾವಿದ್ದೇವೆ ತಡೆದುಕೊಳ್ಳಿ, ಸೆಸ್ಕ್ ನೌಕರರಿಗೆ ಕೊಡುತ್ತಿದ್ದ ಉಚಿತ ವಿದ್ಯುತ್ ನ್ನು ವಾಪಾಸ್ ತೆಗೆದುಕೊಂಡಿದ್ದು ಯಾರು.? ಅವರ ಭರವಸೆಗಳು ಭರವಸೆಗಳಾಗಿಯೇ ಉಳಿಯುತ್ತದೆ, ಅವರದೇ ಸರ್ಕಾರ ರಾಜಾಸ್ಥಾನದಲ್ಲಿದೆ ಮೊದಲು ಅಲ್ಲಿ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಿ ಎಂದು ಸವಾಲ್ ಹಾಕಿದರು.

ಚಾಮರಾಜನಗರದಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಚಲಾವಣೆಯಲ್ಲಿರುವ ನಾಣ್ಯ, ರಾಜ್ಯದಲ್ಲಿ ನನಗೇ ಎಂಬ 25-30 ಕ್ಷೇತ್ರ ಇದೆ, ಬಿಜೆಪಿ ಗೆಲ್ಲಲಾಗಲ್ಲ ಎಂಬ ಕ್ಷೇತ್ರಗಳಲ್ಲಿ ಅತಿಹೆಚ್ಚು ಬಹುಮತದಿಂದ ಬಿಜೆಪಿ ಗೆಲ್ಲಿಸಿದ್ದೇನೆ, ನನಗೆ ಗೋವಿಂದರಾಜನಗರ ಕ್ಷೇತ್ರ ಇದೆ, ಪಕ್ಷ ಎಲ್ಲಿ ಹೇಳುತ್ತೇ ಅಲ್ಲಿ ನಿಂತುಕೊಳ್ಳುತ್ತೇನೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ