ನೀತಿ ಸಂಹಿತೆಗೂ ಮುನ್ನ ವರ್ಗಾವಣೆ: ಚಾಮರಾಜನಗರ ಎಸ್ಪಿ ಬದಲಾವಣೆ - Mahanayaka
8:03 AM Thursday 16 - October 2025

ನೀತಿ ಸಂಹಿತೆಗೂ ಮುನ್ನ ವರ್ಗಾವಣೆ: ಚಾಮರಾಜನಗರ ಎಸ್ಪಿ ಬದಲಾವಣೆ

chamarajanagara
30/01/2023

ಚಾಮರಾಜನಗರ: ಚುನಾವಣಾ ನೀತಿ ಸಂಹಿತೆ ಜಾರಿಗೆ ಒಂದೆರೆಡು ತಿಂಗಳು ಬಾಕಿ ಇದ್ದು ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಮೇಜರ್ ಸರ್ಜರಿ ಮಾಡಿದೆ. ಚಾಮರಾಜನಗರ ಎಸ್ಪಿ ಟಿ.ಪಿ.ಶಿವಕುಮಾರ್ ಸೇರಿದಂತೆ ರಾಜ್ಯದ 13 ಮಂದಿ ಐಪಿಎಸ್ ಅಧಿಕಾರಿಗಳನ್ನು ಇಂದು ವರ್ಗಾವಣೆ‌ ಮಾಡಲಾಗಿದೆ.


Provided by

ಚಾಮರಾಜನಗರ ಟಿ.ಪಿ.ಶಿವಕುಮಾರ್ ಸ್ಥಾನಕ್ಕೆ ಎರಡನೇ ಮಹಿಳಾ ಎಸ್ಪಿಯಾಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹೋ ಅವರನ್ನು ನೇಮಕ‌ ಮಾಡಲಾಗಿದೆ. ಈ ಹಿಂದೆ ಜಿಲ್ಲೆಯ ಮೊದಲ ಮಹಿಳಾ‌ ಎಸ್ಪಿಯಾಗಿ ದಿವ್ಯಾ ಸಾರಾನಾಥ್ ಕಾರ್ಯನಿರ್ವಹಿಸಿದ್ದರು.

ಚಾಮರಾಜನಗರ ನಿರ್ಗಮಿತ ಎಸ್ಪಿ ಶಿವಕುಮಾರ್ ಅವರನ್ನು ಕೆಪಿಟಿಸಿಎಲ್ ನ‌ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೆಲ ದಿನಗಳ ಹಿಂದೆಯಷ್ಟೆ, ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿತ್ತು.

ಟಿ.ಪಿ.ಶಿವಕುಮಾರ್ ಕರ್ತವ್ಯ ಅವಧಿಯಲ್ಲಿ ಎರಡು ಗಣಿ ದುರಂತಗಳು ಸಂಭವಿಸಿತ್ತು. ಆದರೆ,  ಮುಖ್ಯ ಆರೋಪಿಗಳು ಇನ್ನೂ ಬಂಧನವಾಗದಿರುವುದು ಸೇರಿದಂತೆ ಜಿಲ್ಲಾ‌ ಖಾಕಿಪಡೆಯನ್ನು ಚುರುಕು ಮುಟ್ಟಿಸಬೇಕಾದ್ದು ಬಂದಿರುವ ಹೊಸ ಎಸ್ಪಿ ಮೇಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ