ಚಾಮರಾಜನಗರ: ಕಷ್ಟಪಟ್ಟು ಬೆಳೆದಿದ್ದ ಎಕರೆಗಟ್ಟಲೆ ಈರುಳ್ಳಿಯನ್ನು ನಾಶಪಡಿಸಿದ ರೈತರು…!

ಚಾಮರಾಜನಗರ: ಈರುಳ್ಳಿ ಕೇವಪ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುತ್ತಿಲ್ಲ, ಅದನ್ನು ಬೆಳೆದ ರೈತರ ಕಣ್ಣಲ್ಲೂ ನೀರು ಹರಿಸಿದ್ದು ನಂಬಿ ಬೆಳೆದಿದ್ದ ಬೆಳೆ ಬಾರದೇ ಲಕ್ಷಾಂತರ ರೂ. ನಷ್ಟವಾಗಿದೆ.
ಹೌದು…, ಚಾಮರಾಜನಗರ ತಾಲೂಕಿನ ಕೆ.ಕೆ.ಹುಂಡಿ ಗ್ರಾಮದಲ್ಲಿ 5-6 ಮಂದಿ ರೈತರು ಕಷ್ಟಪಟ್ಟು ಬೆಳೆದ ಸಣ್ಣೀರುಳ್ಳಿ ಬೆಳೆಯನ್ನು ಬೇರೆ ದಾರಿ ಕಾಣದೇ ನಾಶಪಡಿಸಿದ್ದು ಸಾಲ ಮಾಡಿದ ಹಣಕ್ಕೆ ಮುಂದೇನು ಎಂಬತಾಗಿದೆ ಅನ್ನದಾತರ ಪರಿಸ್ಥಿತಿ.
80 ದಿನವಾದರು ಬರದ ಫಸಲು: ಅಲ್ಪಾವಧಿ ಬೆಳೆಯಾಗಿರುವ ಸಣ್ಣ ಈರುಳ್ಳಿ ಸಾಮಾನ್ಯವಾಗಿ 55-75 ದಿನಗಳಲ್ಲಿ ಬೆಳೆ ಕಟಾವಿಗೆ ಬರಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಈರುಳ್ಳಿ ಬೆಳೆಯಲಿದ್ದು ತಮಿಳುನಾಡು ಇಲ್ಲಿನ ರೈತರಿಗೆ ಮಾರುಕಟ್ಟೆಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಎಪಿಎಂಸಿಯಲ್ಲಿ ಬಿತ್ತನೆ ಈರುಳ್ಳಿ ತಂದು ನಾಟಿ ಮಾಡಿ ಅದನ್ನು ತಿಂಗಳುಗಟ್ಟಲೆ ಪೋಷಿಸಿದರೂ ಅಕಾಲಿಕ ಮಳೆಯಿಂದಾಗಿ ಕಾಯಿ ಕಟ್ಟದೇ ಲಕ್ಷಾಂತರ ರೂ. ಕೈ ಸುಟ್ಟುಕೊಂಡಿದ್ದಾರೆ.
ಕೆ.ಕೆ.ಹುಂಡಿಯ ಒಬ್ಬೊಬ್ಬ ರೈತ 2- 5 ಲಕ್ಷ ರೂ. ಖರ್ಚು ಮಾಡಿದ್ದು ಎರಡು ತಿಂಗಳಿನಿಂದ ಹಿಂದೆ ಸುರಿದ ಮಳೆ ರೈತನ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಬೆಳೆ ಇಟ್ಟಿಕೊಂಡರೇ ಫಸಲು ಬರಲ್ಲ, ಬೆಳೆ ನಾಶಪಡಿಸಿದರೇ ಹಣ ಬರದ ತ್ರಿಶಂಕು ಸ್ಥಿತಿ ಇಲ್ಲಿನ ರೈತರದ್ದಾಗಿದ್ದು ಸಾಲ ತೀರಿಸಲಾಗದೇ ಕೆಲ ರೈತರು ಊರು ಬಿಟ್ಟು ಪಟ್ಟಣ ಸೇರಿ ಬೇರೆ ನೌಕರಿ ಹುಡುಕುತ್ತಿದ್ದಾರೆ.
ಎಕರೆಗಟ್ಟಲೇ ಬೆಳೆ ನಾಶ: ಕಷ್ಟಪಟ್ಟು ದುಡಿದು, ಪ್ರಾಣಿಗಳಿಂದ ರಕ್ಷಿಸಿದ್ದ ಬೆಳೆ ಕೈ ಸೇರದಿದ್ದರಿಂದ ಬೇರೆ ದಾರಿ ಕಾಣದ ರೈತರು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸಿ ಬೆಳೆ ನಾಶ ಪಡಿಸಿದ್ದಾರೆ. 3 ಎಕರೆಯಲ್ಲಿ ಈರುಳ್ಳಿ ಹಾಕಿದ್ದ ನಾಗರಾಜು ಎಂಬ ರೈತ ಸತತ 5 ಬೆಳೆಗಳನ್ನು ಕೈ ಸುಟ್ಟುಕೊಂಡಿದ್ದು ಬೇಸಾಯ ಮಾಡುವುದೇ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಾಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹಾಕಿದೇ, ಬೆಳೆಯೇ ಬರಲಿಲ್ಲ, ಸಾಲ ಕೊಟ್ಟವರು ಮನೆ ಬಾಗಿಲಿಗೆ ಬರುತ್ತಿದ್ದಾರೆ, ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಅಲಳು ತೋಡಿಕೊಂಡಿದ್ದಾರೆ.
ಬೆಲೆ ಇದೆ ಆದ್ರೆ ಬೆಳೆಯೇ ಇಲ್ಲಾ: ಪ್ರಸ್ತುತ ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 35-40 ರೂ. ಇದೆ. ಆದರೆ, ಈ ರೈತರು ಹಾಕಿದ ಬೆಳೆಯೇ ಕೈಗೆ ಬರದಿದ್ದರಿಂದ ಬೆಲೆ ಇದ್ದರೂ ಏನು ಮಾಡಲಾಗದ ಅಸಹಾಯಕ ಸ್ಥಿತಿ ಇವರದ್ದಾಗಿದೆ.ಈ ಸಂಬಂಧ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ನೊಂದ ರೈತರ ನೆರವಿಗೆ ಧಾವಿಸಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw