ಹೀಗೊಂದು ಪ್ರೇಮ ಪ್ರಕರಣ: ಪ್ರೇಮಿಗಾಗಿ ಗಡಿದಾಟಿ ಭಾರತಕ್ಕೆ ಯುವತಿ ಅಕ್ರಮ ಪ್ರವೇಶ - Mahanayaka
7:11 PM Wednesday 10 - September 2025

ಹೀಗೊಂದು ಪ್ರೇಮ ಪ್ರಕರಣ: ಪ್ರೇಮಿಗಾಗಿ ಗಡಿದಾಟಿ ಭಾರತಕ್ಕೆ ಯುವತಿ ಅಕ್ರಮ ಪ್ರವೇಶ

love case
09/02/2023

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪಾಕಿಸ್ತಾದ ಯುವತಿ ಪತ್ತೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ರಾಜ್ಯ ಅಂತರಿಕ ಭದ್ರತಾದಳ ಮತ್ರು ರಾಜ್ಯ ಗುಪ್ತಚರ ಇಲಾಖೆಯಿಂದ ವರದಿ ಸಲ್ಲಿಕೆ ಮಾಡಲಾಗಿದೆ.


Provided by

ಹೀಗೆ ಅಕ್ರಮವಾಗಿ‌ ಬೆಂಗಳೂರಿಗೆ ಬಂದ ಈ ಪ್ರಕರಣದಲ್ಲಿ ಬೇರಾವುದೇ ಇತರೆ ಉದ್ದೇಶವಿರದೇ ಪ್ರೀತಿಗಾಗಿಯೇ ಅಕ್ರಮ‌ನುಸುಳುವಿಕೆಯಾಗಿರುವುದು ಕಂಡು ಬಂದಿದೆ. ಪಾಕಿಸ್ತಾನದ ಯುವತಿ ಇಕ್ರಾ ಹಾಗೂ ಬಿಹಾರದ ಮುಲಾಯಂ ಸಿಂಗ್ ಯಾದವ್ ಇಬ್ಬರಿಗೂ ಯಾವುದೇ ಕ್ರಿಮಿನಲ್ ಬ್ಯಾಗ್ರೌಂಡ್ ಸಹ ಇಲ್ಲ ಅಂತಾ ವರದಿ ನೀಡಲಾಗಿದೆ. ನಾಲ್ಕು ವರ್ಷಗಳ ಪ್ರೀತಿ ಬಳಿಕ ಭಾರತಕ್ಕೆ ಬರಲು ಯುವತಿ ಸಿದ್ದವಾಗಿದ್ದಳು. ಮನೆಯವರ ಒಪ್ಪಿಗೆ ಪಡೆದೆ ಭಾರತಕ್ಕೆ ಬಂದಿದ್ದಾಳೆ.

ಪಾಕಿಸ್ತಾನದ ಹೈದರಾಬಾದ್‍ (Hyderabad) ನಿಂದ ಕರಾಚಿಗೆ ಹೋಗಿದ್ದ ಯುವತಿ, ಅಲ್ಲಿಂದ ದುಬೈ  ಗೆ ಹೋಗಿ ದುಬೈನಿಂದ ನೇಪಾಳಕ್ಕೆ ಬಂದಿದ್ದಳು. ನೇಪಾಳಕ್ಕೆ ಹೋಗಿ ಯುವತಿಯನ್ನ ಕರೆದುಕೊಂಡು ಬಂದಿದ್ದ ಮುಲಾಯಂಸಿಂಗ್ ಯಾದವ್. ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದಳು.

ಪೊಲೀಸರು ಪತ್ತೆ ಮಾಡಿದ ಬಳಿಕ ಯುವತಿಯ ಬಗ್ಗೆ ಸಂಪೂರ್ಣ ಮಾಹಿತಿ ಜಾಲಾಡಿದ್ದ ಐಎಸ್‍ಡಿ ಹಾಗೂ ಗುಪ್ತಚರ ಇಲಾಖೆ ಪ್ರೀತಿಗಾಗಿಯೇ ಇಕ್ರಾ ಗಡಿ ದಾಟಿ ಬಂದಿರುವುದು ಧೃಡವಾಗಿದೆ. ಸದ್ಯ ಇನ್ನು ಎಫ್ ಆರ್ ಆರ್ ಒ ವಶದಲ್ಲಿರುವ ಇಕ್ರಾಳನ್ನ ಗಡಿ ಹೊರಗೆ ಬಿಡೋಕೆ ಮಾತುಕತೆ ನಡೆಸ್ತಿದೆ. ಪ್ರೀತಿಗಾಗಿ ಶತ್ರು ರಾಷ್ಟ್ರದಿಂದ ಯುವತಿಯನ್ನ ಕರೆತಂದ ಗುರುತರ ಆರೋಪ ಮುಲಾಯಂ ಸಿಂಗ್ ಮೇಲಿದ್ದು, ವಿಚಾರಣೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ