ಫೆ.11ರಂದು ಅಮಿತ್ ಶಾ ಪುತ್ತೂರಿಗೆ: ಕೊರಗಜ್ಜನ ಕೋಲ ಹಿನ್ನೆಲೆ ರೋಡ್ ಶೋಗೆ ಪರ್ಯಾಯ ಮಾರ್ಗ - Mahanayaka
8:45 AM Thursday 11 - September 2025

ಫೆ.11ರಂದು ಅಮಿತ್ ಶಾ ಪುತ್ತೂರಿಗೆ: ಕೊರಗಜ್ಜನ ಕೋಲ ಹಿನ್ನೆಲೆ ರೋಡ್ ಶೋಗೆ ಪರ್ಯಾಯ ಮಾರ್ಗ

amith shah
09/02/2023

ಇದೇ ಫೆಬ್ರವರಿ 11ರ ಶನಿವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.  ಮತ್ತೊಂದೆಡೆ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಲು ನಿರ್ಧರಿಸಲಾಗಿತ್ತು. ಕಾವೂರಿನಿಂದ ಪದವಿನಂಗಡಿ ಮೇರಿಹಿಲ್ ವರೆಗೆ ಸುಮಾರು ಎರಡೂವರೆ ಕಿ.ಮೀ. ಉದ್ದಕ್ಕೆ ರೋಡ್ ಶೋ ನಲ್ಲಿ ಅಮಿತ್ ಶಾ ಭಾಗವಹಿಸುವುದು ಬಹುತೇಕ ಫಿಕ್ಸ್ ಆಗಿತ್ತು.


Provided by

ಈ ಮಧ್ಯೆ ಪದವಿನಂಗಡಿ ನಡುವೆ ಬರುವ ಕೊರಗಜ್ಜನ ಗುಡಿಯಲ್ಲಿ ಫೆಬ್ರವರಿ 11 ರಂದು ಕೋಲ ನಡೆಯುವ ವಿಷಯ ಗೊತ್ತಾಗಿದೆ. ಅಂದು ರೋಡ್ ಶೋ ನಡೆಸಿದರೆ ಕೋಲಕ್ಕೆ ಹಾಗೂ ಅಲ್ಲಿನ ಜನರಿಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಬಿಜೆಪಿ ನಾಯಕರು ಅಮಿತ್ ಶಾಗೆ ವಿಷಯ ತಿಳಿಸಿದ್ದಾರೆ.

ಕೊರಗಜ್ಜನ ಕೋಲಕ್ಕೆ ತೊಂದರೆಯಾಗುವುದಾದರೆ ರೋಡ್ ಶೋ ವನ್ನೇ ರದ್ದು ಮಾಡಿ ಎಂದು ಅಮಿತ್ ಶಾ ಬಿಜೆಪಿ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಲು ಪರ್ಯಾಯ ಮಾರ್ಗ ಹುಡುಕಲಾಗ್ತಿದ್ದು ಮಂಗಳೂರು ಏರ್ ಪೋರ್ಟ್ ಮತ್ತು ಮರವೂರು ಸೇತುವೆ ಮಧ್ಯೆ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ