ಅಹಂಕಾರ, ದರ್ಪ ಯಾವುದು ವರ್ಕೌಟ್ ಆಗೋದಿಲ್ಲ ಶಾಸಕ ಪ್ರೀತಂ ಗೌಡಗೆ ನಿಖಿಲ್ ತಿರುಗೇಟು
ಚಾಮರಾಜನಗರ: ಜೆಡಿಎಸ್ ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲಿ ಪಕ್ಷ ಬಲಿಷ್ಠವಿರುತ್ತೋ, ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರ್ತಾರೆ. ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಶೀಘ್ರದಲ್ಲೇ ಅದಕ್ಕೆ ತೆರೆ ಎಳೆಯುತ್ತಾರೆ. ಎಲ್ಲಾ ಗೊಂದಲಕ್ಕೂ ಕೂಡ ಶೀಘ್ರವೇ ಬ್ರೇಕ್ ಬೀಳುತ್ತೆ ಎಂದರು.
ಶಾಸಕ ಪ್ರೀತಂ ಗೌಡ 50 ಸಾವಿರಕ್ಕಿಂತ ಒಂದು ವೋಟ್ ಕಡಿಮೆ ಬಿದ್ದರು, ಮರು ಚುನಾವಣೆಗೆ ಹೋಗ್ತೇನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ನಾವೂ ಎಷ್ಟು ತಲೆ ತಗ್ಗುತ್ತೇವೆ,ಅಷ್ಟು ಜನ ನಮ್ಮನ್ನು ರಾಜಕೀಯವಾಗಿ ಬೆಳೆಸುತ್ತಾರೆ. ಅಹಂಕಾರ, ದರ್ಪ ಯಾವುದು ವರ್ಕೌಟ್ ಆಗೋದಿಲ್ಲ. ಸಮಯ ಹತ್ತಿರ ಬಂದಿದೆ ಜನರು ತೀರ್ಮಾನ ಮಾಡ್ತಾರೆ ಎಂದು ಪ್ರೀತಂ ಗೌಡಗೆ ತಿರುಗೇಟು ನೀಡಿದರು.
ನಾನು ಚುನಾವಣೆ ವೇಳೆಯೂ ಕೂಡ ಸುಮಲತಾರನ್ನು ತಾಯಿಯೆಂದು ಕರೆದಿದ್ದೇನೆ. ಲೋಕಸಭಾ ಚುನಾವಣೆಗೆ ತಾಯಿ ವಿರುದ್ಧ ನಿಂತಾಗ ನಂಗೆ ಅನುಭವವಿರಲಿಲ್ಲ. ಅವತ್ತು ತಾಯಿ ಅಂತಾ ಮಾತನಾಡಿಸಿದ್ದೇನೆ, ಇವತ್ತು ಆ ಪದವನ್ನೇ ಬಳಸುತ್ತೇನೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























