ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್: ವ್ಯಕ್ತಿ ಸ್ಥಳದಲ್ಲೇ ಸಾವು - Mahanayaka

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್: ವ್ಯಕ್ತಿ ಸ್ಥಳದಲ್ಲೇ ಸಾವು

bengalore
18/02/2023


Provided by

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ  ಹೈಗ್ರೌಂಡ್ ಸಂಚಾರ ಠಾಣೆ ವ್ಯಾಪ್ತಿಯ ಫ್ಲಾಟ್ ಫಾರಂ ರಸ್ತೆಯ ಕೆಎಫ್ ಎಂ ಜಂಕ್ಷನ್ ಬಳಿ ನಡೆದಿದೆ.

ಬಸ್ ಚಾಲಕನ ಅಜಾಗರೋಕತೆಯ ಚಾಲನೆಯಿಂದಾಗಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಸ್ ಡಿಕ್ಕಿಯಾಗಿದ್ದು, ಪರಿಣಾಮವಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ.  ಘಟನೆ ಸಂಬಂಧ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಈವರೆಗೆ ದೊರೆತಿಲ್ಲ,  ವ್ಯಕ್ತಿಯು ಸುಮಾರು 40ರಿಂದ 45 ವರ್ಷದ ವಯಸ್ಸಿನವರಾಗಿದ್ದು, 5.6 ಅಡಿ ಎತ್ತರ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಗೋದಿ ಮೈ ಬಣ್ಣ, ಕೋಲು ಮುಖ, ಕಪ್ಪು ಕೂದಲು ಹೊಂದಿದ್ದಾರೆ. ಘಟನೆ ನಡೆದ ವೇಳೆ ಅವರು ನೀಲಿ ಬಣ್ಣದ ಶರ್ಟ್, ಕಾಪಿ ಬಣ್ಣದ ಲುಂಗಿ ಧರಿಸಿದ್ದರು.

ಈ ವ್ಯಕ್ತಿಯ ಕುರಿತು ಯಾವುದಾದರೂ ಮಾಹಿತಿಗಳು ತಿಳಿದು ಬಂದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮೊಬೈಲ್ ಸಂಖ್ಯೆ 9480801827 ಅಥವಾ ಠಾಣೆ ದೂರವಾಣಿ ಸಂಖ್ಯೆ 08022942196/17 ಅಥವಾ ಸಂಚಾರ ಪೂರ್ವ ಕಂಟ್ರೋಲ್ ರೂಮ್ 08022943131 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ