ಎನ್. ಮಹೇಶ್ ರಾಜಕೀಯ ಅಂತಿಮ ಯಾತ್ರೆ ಆರಂಭ, ಕಾಂಗ್ರೆಸ್ ಸೇರ್ತಿದ್ದಾರೆ ಬಿಜೆಪಿ ಟಿಕೆಟ್ ಆಕಾಂಕ್ಷಿ: ಡಿಕೆಶಿ - Mahanayaka
1:41 PM Tuesday 18 - November 2025

ಎನ್. ಮಹೇಶ್ ರಾಜಕೀಯ ಅಂತಿಮ ಯಾತ್ರೆ ಆರಂಭ, ಕಾಂಗ್ರೆಸ್ ಸೇರ್ತಿದ್ದಾರೆ ಬಿಜೆಪಿ ಟಿಕೆಟ್ ಆಕಾಂಕ್ಷಿ: ಡಿಕೆಶಿ

dk shivakumar
22/02/2023

ಚಾಮರಾಜನಗರ: ನಮ್ಮ ರಿಪೋರ್ಟ್ ಪ್ರಕಾರ ಕೊಳ್ಳೇಗಾಲದಲ್ಲಿ ಬರುವುದು ಕಾಂಗ್ರೆಸ್, ಎನ್. ಮಹೇಶ್ ತಲೆಕೆಳಕಾಗಿ ನಡೆದರೂ ಗೆಲ್ಲಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರ ರಾಜಕೀಯ ಅಂತಿಮ ಯಾತ್ರೆ ಆರಂಭವಾಗಿದೆ, ಮೂವರು ಕೈ ಟಿಕೆಟ್ ಆಕಾಂಕ್ಷಿಗಳಿದ್ದು ಯಾರೊಬ್ಬರ ಕಾಲನ್ನು ಯಾರೂ ಎಳೆಯಬಾರದು ಎಂದು ಸೂಚಿಸಿದರು.

ತಾವು ನಂಬಿದ್ದ ಸಿದ್ಧಾಂತ, ತಾವು ನಡೆಸಿದ ಚಳವಳಿ, ಮಾಯವತಿ ಅವರ ನಾಯಕತ್ವ ಎಲ್ಲವನ್ನೂ ಬಿಟ್ಟು ಸಂವಿಧಾನ ಬದಲಿಸುತ್ತೇವೆ ಎಂಬ ಪಕ್ಷಕ್ಕೆ ಮಹೇಶ್ ಸೇರ್ಪಡೆಗೊಂಡಿರುವುದು ನನ್ಜ ಮನಸ್ಸಿಗೆ ಬಹಳ ಬೇಜಾರು ತಂದಿತು, ಆನೆಯನ್ನು ಕಾಡಿಗಟ್ಟಿ ಕಮಲವನ್ನು ಹಿಡಿದ ಮಹೇಶ್ ಅವರಿಗೆ ಬಿಜೆಪಿ ಮಂತ್ರಿಗಿರಿ ಕೊಡಲಿಲ್ಲ, ಅವರೂ ಅಭಿವೃದ್ಧಿಯನ್ನು ಮಾಡಿಲ್ಲ, ರಾಜಕೀಯದ ಯೋಗವನ್ನು ಮಹೇಶ್ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಕೈ ಕದ ತಟ್ಟಿದ ಬಿಜೆಪಿ ಟಿಕೆಟ್ ಆಕಾಂಕ್ಷಿ:

ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ  ಜಿ.ಎನ್.ನಂಜುಂಡಸ್ವಾಮಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರವನ್ನು  ಡಿ.ಕೆ.ಶಿವಕುಮಾರ್ ಬಹಿರಂಗಪಡಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ, ಕೆಲವೇ ದಿನಗಳಲ್ಲಿ ನನ್ನ ಜೊತೆಯೂ ಮಾತನಾಡಲಿದ್ದು ತನ್ನ ರಾಜಕೀಯ ಕೊನೆ ನಿಲ್ದಾಣ ಕಾಂಗ್ರೆಸ್ ಎಂದು ಜಿ.ಎನ್.ನಂಜುಂಡಸ್ವಾಮಿ ತಿಳಿಸಿದ್ದಾರೆ ಎಂದು ಡಿಕೆಶಿ ಬಹಿರಂಗಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ