ಇದು ನನ್ನ ಕೊನೆಯ ಅಧಿವೇಶನ ಎಂದ ಬಿಎಸ್ವೈ; ಯಾಕೆ ಕೊನೆ ಚುನಾವಣೆ ಅಂತೀರಾ ಎಂದು ಕಾಲೆಳೆದ ಕೈ ನಾಯಕರು - Mahanayaka

ಇದು ನನ್ನ ಕೊನೆಯ ಅಧಿವೇಶನ ಎಂದ ಬಿಎಸ್ವೈ; ಯಾಕೆ ಕೊನೆ ಚುನಾವಣೆ ಅಂತೀರಾ ಎಂದು ಕಾಲೆಳೆದ ಕೈ ನಾಯಕರು

yadiyurappa
22/02/2023


Provided by

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನ ಕೈಗೊಂಡಿದೆ. ಇತ್ತ ಚುನಾವಣೆ ಹೊತ್ತಲಿ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಿದ್ದು, ಈ ಬಜೆಟ್ ಅಧಿವೇಶನ ಕೆಲ ನಾಯಕರಿಗೆ ಕೊನೆಯ ಅಧಿವೇಶನ ಅಂದ್ರೆ ತಪ್ಪಾಗಲಾರದು.

ಇಂದಿನ ಬಜೆಟ್ ಅಧಿವೇಶನದ ವೇಳೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಇದು ನನ್ನ ಕೊನೆಯ ಅಧಿವೇಶನ ಎಂದಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಯಾಕೆ ಕೊನೆ ಚುನಾವಣೆ ಅಂತೀರಾ. ಮತ್ತೆ ಚುನಾವಣೆಗೆ ನಿಲ್ಲಿ, ಯಾಕೆ ನಿಮ್ಮ ಹೈಕಮಾಂಡ್ ನಿಮ್ಮನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಲ್ವಾ ಎಂದು ಕಾಂಗ್ರೆಸ್ ನಾಯಕರು ಸದನದಲ್ಲಿ ಕಾಲೆಳೆದಿದ್ದಾರೆ.

ಇನ್ನೂ ಈ ವೇಳೆ ಸದನದಲ್ಲಿ ಮಾತನಾಡುವ ವೇಳೆ ಇದು ನನ್ನ ಕೊನೆಯ ಅಧಿವೇಶನ ಎಂದು ಬಿ ಎಸ್ ಯಡಿಯೂರಪ್ಪ ಭಾವುಕರಾಗಿದ್ದಾರೆ. ಕಾಂಗ್ರೆಸ್ ನಾಯಕರು ಪದೇ ಪದೇ ಪಕ್ಷ ನನ್ನನ್ನ ಕಡೆಗಣಿಸಿದೆ ಎನ್ನುತ್ತಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಎಂದು ನನ್ನ ಕಡೆಗಣಿಸಿಲ್ಲ. ಯಡಿಯೂರಪ್ಪನವರಿಗೆ ಮೋದಿ ಗೌರವ ಕೊಟ್ಟಿದ್ದಾರೆ, ಒಳ್ಳೆಯ ಅವಕಾಶ, ಸ್ಥಾನಮಾನ ಕೊಟ್ಟಿದ್ದಾರೆ. ಅವರನ್ನ ನಾನು‌ ಮರೆಯಲು ಸಾಧ್ಯವಿಲ್ಲ. ಪಕ್ಷದ ಅವಕಾಶದಿಂದ 4 ಬಾರಿ ಮುಖ್ಯಮಂತ್ರು ಆಗಿದ್ದೇನೆ.

ಸೂರ್ಯ,ಚಂದ್ರ ಇರುವುದು ಎಷ್ಟು ಸತ್ಯವೋ, ಬಿಜೆಪಿ ಅಧಿಕಾರಕ್ಕೆ‌ ಬರುವುದು ಅಷ್ಟೇ ಸತ್ಯ. ಇದು ನಾನು‌ ಭವಿಷ್ಯ ಹೇಳ್ತೇನೆ ಅಂದು ಕೊಳ್ಳಬೇಡಿ, ನಾಳೆಯಿಂದ ನಾನು ರಾಜ್ಯ ಪ್ರವಾಸ ಮಾಡ್ತೇನೆ. ಇನ್ನೆರಡು ತಿಂಗಳಲ್ಲಿ ನೀವೇ ನೋಡಿ, ಯಾವ ರೀತಿ ಗಾಳಿ ಬೀಸುತ್ತೆ ಅಂತ ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಅಧಿವೇಶನ ಮುಗಿದ ಕೂಡಲೇ ಕ್ಷೇತ್ರಗಳಿಗೆ ತೆರಳಿ. ಜನರ ಮನವನ್ನ ಒಲಿಸುವ ಕೆಲಸ ಮಾಡಿ, ಬೇರೆ ಸರ್ಕಾರ ಕೊಡದ ಕಾರ್ಯಕ್ರಮ ನಾವು ಕೊಟ್ಟಿದ್ದೇವೆ. ನಾವು ಮತ್ತೆ ಅಧಿಕಾರಕ್ಕೆ ಬರ್ತಿವಿ. ಕಾಂಗ್ರೆಸ್ ನವರು ಮುಂದೆ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳುತ್ತಾರೆ. ಸಿದ್ದರಾಮಯ್ಯನವರೇ ನೀವು ಗೆದ್ದ ಕ್ಷೇತ್ರದಲ್ಲಿ ಯಾಕೆ ನಿಲ್ಲಲ್ಲ. ನಿಮ್ಮ ಕ್ಷೇತ್ರದಲ್ಲಿ ನೀವು ಅಭಿವೃದ್ಧಿ ಮಾಡಿಲ್ಲವೇ ಎಂದು ಸದನದಲ್ಲಿ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದ್ದಾರೆ.

ನಾನು ಸಿದ್ದರಾಮಯ್ಯ ಅವರೇ ನೀವು ಎಲ್ಲಿ ಗೆದ್ದಿದ್ದಿರಾ ಅಲ್ಲಿಂದಲೇ ನಿಲ್ಲಬೇಕು. ಬಾದಾಮಿಯಲ್ಲಿ ನಿಂತು ಗೆದ್ದು ಬಂದವರು, ಯಾಕೆ ನೀವು ಅಲ್ಲಿಗೆ ಹೋಗ್ತಿಲ್ಲ. ಸಿದ್ದರಾಮಯ್ಯನವರಿಗೆ ಅಲ್ಲಿ ಭಯ ಕಾಡುತ್ತಿದ್ಯಾ? ಸಿದ್ದರಾಮಯ್ಯನವರು ಬಾದಾಮಿಯಲ್ಲೇ ನಿಲ್ಲಬೇಕು. ನಾನು ಬದುಕಿನ ಉಸಿರುವವರೆಗೆ ಬಿಜೆಪಿಯಲ್ಲೇ ಇರ್ತಿನಿ ಎಂದು ಭಾವುಕರಾದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ