ರಂಝಾನ್ ಮಾಸ ಮುಗಿಯುವವರೆಗೆ ಬೆಳಗ್ಗಿನ ಆಜಾನ್ ಗೆ ಲೌಡ್ ಸ್ಪೀಕರ್ ಅನುಮತಿ ನೀಡಿ | ಮುಸ್ಲಿಂ ಮುಖಂಡರ ಮನವಿ - Mahanayaka

ರಂಝಾನ್ ಮಾಸ ಮುಗಿಯುವವರೆಗೆ ಬೆಳಗ್ಗಿನ ಆಜಾನ್ ಗೆ ಲೌಡ್ ಸ್ಪೀಕರ್ ಅನುಮತಿ ನೀಡಿ | ಮುಸ್ಲಿಂ ಮುಖಂಡರ ಮನವಿ

azan
07/03/2023

ಚಿಕ್ಕಮಗಳೂರು: ಪವಿತ್ರ ರಂಝಾನ್ ಮಾಸದಲ್ಲಿ ಬೆಳಗ್ಗಿನ ಆಜಾನ್ ಗೆ ಲೌಡ್ ಸ್ಪೀಕರ್ ಅನುಮತಿ ನೀಡುವಂತೆ ಚಿಕ್ಕಮಗಳೂರು ಡಿ.ಸಿ. ರಮೇಶ್ ಗೆ ಮುಸ್ಲಿಂ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ರಂಝಾನ್ ಮಾಸ ಮುಗಿಯುವವರೆಗೂ ಬೆಳಗ್ಗಿನ ಆಝಾನ್ ಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿರುವ  ಮುಸ್ಲಿಮ್ ಮುಖಂಡರು ಬೆಳಗ್ಗೆ 5 ನಿಮಿಷಗಳ ಕಾಲ ಲೌಡ್ಸ್ ಸ್ಪೀಕರ್ ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಆಝಾನ್ ರಂಝಾನ್ ಆಚರಣೆಯ ಒಂದು ಭಾಗವಾಗಿದೆ. ಹಾಗಾಗಿ ಗರಿಷ್ಠ 5 ನಿಮಿಷಗಳ ಕಾಲ ಅನುಮತಿ ನೀಡುವಂತೆ ಚಿಕ್ಕಮಗಳೂರು ಡಿ.ಸಿ. ರಮೇಶ್ ಗೆ ಮುಸ್ಲಿಂ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ಕ್ರೀಡಾ ಕೂಟಗಳಿಗೆ, ವಿಶೇಷ ಸಂದರ್ಭಗಳಲ್ಲಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ರಾತ್ರಿ ಹಾಗೂ ಮುಂಜಾನೆ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಿದ್ದೀರಿ, ಹಾಗೆಯೇ ರಂಝಾನ್ ಮಾಸದಲ್ಲಿ ಆಜಾನ್ ಗೆ ಕೂಡ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ