ಮುಳ್ಳಿನ ಮೇಲೆ ಹಾರಿ ಬಿಸಿಲು ಮಾರಮ್ಮಗೆ ಭಕ್ತಿ ಸಮರ್ಪಿಸಿದ ಭಕ್ತರು! - Mahanayaka
2:58 PM Thursday 23 - October 2025

ಮುಳ್ಳಿನ ಮೇಲೆ ಹಾರಿ ಬಿಸಿಲು ಮಾರಮ್ಮಗೆ ಭಕ್ತಿ ಸಮರ್ಪಿಸಿದ ಭಕ್ತರು!

maramma
07/03/2023

ಚಾಮರಾಜನಗರ: ಮುಳ್ಳಿನ ಮೇಲೆ ಹಾರಿ ಮಾರಮ್ಮನಿಗೆ ಭಕ್ತಿ ಸಮರ್ಪಿಸುವ ಹಬ್ಬ ಚಾಮರಾಜನಗರ ಜಿಲ್ಲೆ ಗೂಳಿಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು.

ಚಾಮರಾಜನಗರ ಜಿಲ್ಲೆ ಗೂಳಿಪುರ ಗ್ರಾಮದಲ್ಲಿ ಬಿಸಿಲು ಮಾರಮ್ಮ ಜಾತ್ರಾ ಮಹೋತ್ಸವದಲ್ಲಿ ಇಂತಹದ್ದೊಂದು ವಿಶಿಷ್ಟ ಆಚರಣೆ ಇದೆ. ಇಲ್ಲಿ ಭಕ್ತರು ಮುಳ್ಳಿನ ಪೊದೆಗೆ ಹಾರುವ ಮೂಲಕ ಬಿಸಿಲು ಮಾರಮ್ಮಗೆ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಾರೆ.

ಗ್ರಾಮ ದೇವತೆ ಹಬ್ಬದ ಹಿನ್ನೆಲೆ ಮಾರಮ್ಮದೇವಿಗೆ ದೀಪ ಮತ್ತು ಧೂಪದ ನೈವೇದ್ಯ ಬೆಳಗಿಸಿದ ಗ್ರಾಮಸ್ಥರು, ದೇಗುಲದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ದೇವಿಗೆ ತಂಬಿಟ್ಟು ಆರತಿ ಮಾಡುವ ಮೂಲಕ ಹರಕೆ ಸಲ್ಲಿಸಿದರು.

ಜಾತ್ರೆ ಸಂಭ್ರಮದ ವೇಳೆ ಮಾರಮ್ಮ ದೇವಿಯ ಭಕ್ತರು ಮುಳ್ಳಿನ ಪೊದೆಗಳ ಮೇಲೆ ಹಾರುವುದು ವಿಶೇಷ. ನಂತರ ಬಿದ್ದ ಎಲ್ಲರನ್ನು ಗ್ರಾಮಸ್ಥರು ಮೇಲೆ ಎತ್ತುತ್ತಾರೆ. ಈ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮದ ಸಾವಿರಾರು ಜನರು ಕಾಯುತ್ತಾರೆ.

ನೂರಾರು ವರ್ಷಗಳಿಂದ ಗ್ರಾಮದಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಭಕ್ತರು ದೇವರ ದರ್ಶನ ಜೊತೆ ಈ ಆಚರಣೆಯಿಂದ ಸಂಭ್ರಮಿಸುತ್ತಾರೆ. ಆ ರೀತಿ ಆಚರಣೆ ಮಾಡಿದರೆ ಮನೆಗೆ ಹಾಗೂ ಗ್ರಾಮಕ್ಕೆ ಒಳ್ಳೆಯದು ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಅಷ್ಟು ಮುಳ್ಳು ಇರುವ ಜಾಗಕ್ಕೆ ಬಿದ್ದರೂ ಸಹ ಯಾರಿಗೂ ಏನಾಗದಿರುವುದು ಇಲ್ಲಿನ ಮತ್ತೊಂದು ವಿಶೇಷ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ