ಸೋನಿಯಾ ಗಾಂಧಿ, ಮಾಯಾವತಿ ಅವರಿಗೆ ಭಾರತ ರತ್ನ ನೀಡಲು ಒತ್ತಾಯಿಸಿದ ಮಾಜಿ ಮುಖ್ಯಮಂತ್ರಿ - Mahanayaka
11:25 PM Saturday 18 - October 2025

ಸೋನಿಯಾ ಗಾಂಧಿ, ಮಾಯಾವತಿ ಅವರಿಗೆ ಭಾರತ ರತ್ನ ನೀಡಲು ಒತ್ತಾಯಿಸಿದ ಮಾಜಿ ಮುಖ್ಯಮಂತ್ರಿ

06/01/2021

ದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಬಹುಜನ ಸಮಾಜ ಪಾರ್ಟಿ(BSP)ಯ ಮುಖ್ಯಸ್ಥೆ ಮಾಯಾವತಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಒತ್ತಾಯಿಸಿದ್ದಾರೆ.


Provided by

ಸೋನಿಯಾ ಗಾಂಧಿ ಹಾಗೂ ಮಾಯಾವತಿ ಇಬ್ಬರು ಕೂಡ ಪ್ರಖ್ಯಾತ ರಾಜಕಾರಣಿಗಳು. ಮಾಯಾವತಿ ಅವರು ಗಾಂಧಿ ರಾಜಕೀಯವನ್ನು ಒಪ್ಪದೇ ಇರಬಹುದು ಆದರೆ, ಅವರು ಮಹಿಳಾ ಸಬಲೀಕಣ ಹಾಗೂ ಸಾರ್ವಜನಿಕ ಸೇವೆಗೆ ನೀಡಿದ ಕೊಡುಗೆ ಅಪಾರವಾದದ್ದು. ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಾಯಾವತಿ ಹಾಗೂ ಸೋನಿಯಾ ಗಾಂಧಿ ಅವರನ್ನು ಸ್ತ್ರೀತ್ವದ ಪ್ರಸಂಶನೀಯರೆಂದು  ಪರಿಗಣಿಸಲಾಗಿದೆ. ಹೀಗಾಗಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು  ಹರೀಶ್ ರಾವತ್ ಭಾರತ ಸರ್ಕಾಕ್ಕೆ ಒತ್ತಾಯಿಸಿದ್ದಾರೆ.

ಸೋನಿಯಾ ಗಾಂಧಿ ಹಾಗೂ ಮಾಯಾವತಿ ಅವರಿಗೆ ಭಾರತ ರತ್ನ ನೀಡಬೇಕು. ಇವರಿಬ್ಬರೂ ಪ್ರಖ್ಯಾತ ರಾಜಕಾರಣಿಗಳಾಗಿದ್ದಾರೆ ಎಂದು ಟ್ವೀಟ್ ಮಾಡಿರುವ ರಾವತ್, ಇವರು ಮಹಿಳಾ ಸಬಲಿಕರಣಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ