ಪಾಲಾರ್ ಬಳಿ ನೀರಿನಲ್ಲಿ ಮುಳುಗುತ್ತಿದ್ದ ಮರಿಯಾನೆ ರಕ್ಷಣೆ- ಕೊನೆಗೂ ತಾಯಿ ಮಡಿಲು ಅಪ್ಪಿತು!! - Mahanayaka
11:32 PM Tuesday 21 - October 2025

ಪಾಲಾರ್ ಬಳಿ ನೀರಿನಲ್ಲಿ ಮುಳುಗುತ್ತಿದ್ದ ಮರಿಯಾನೆ ರಕ್ಷಣೆ- ಕೊನೆಗೂ ತಾಯಿ ಮಡಿಲು ಅಪ್ಪಿತು!!

chamarajnagara
24/03/2023

ಚಾಮರಾಜನಗರ: ಪತ್ರಕರ್ತನ ಸಮಯಪ್ರಜ್ಞೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಮರಿಯಾನೆಯೊಂದು ತಾಯಿ ಮಡಿಲು ಸೇರಿದ ಘಟಜೆ ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಪಾಲಾರ್ ಅರಣ್ಯ ಪ್ರದೇಶದ ಬೀಟ್ ನಲ್ಲಿ ಗುರುವಾರ ನಡೆದಿದೆ.

ದಿನಪತ್ರಿಕೆಯೊಂದರ ವರದಿಗಾರ ಜಿ.ಪ್ರದೀಪ್ ಕುಮಾರ್ ಮತ್ತು ಕುಟುಂಬ ತಮಿಳುನಾಡಿನ ಕೊಳತ್ತೂರಿಗೆ ತೆರಳುತ್ತಿದ್ದಾಗ ಮೆಟ್ಟೂರು ಹಿನ್ನೀರಿನಲ್ಲಿ ಆನೆ ಮರಿಯೊಂದು ನೀರು ದಾಟಲು ತೆರಳಿ ಮುಳುಗುತ್ತಿದ್ದನ್ನು ಗಮನಿಸಿದ್ದಾರೆ. ಕೂಡಲೇ, ಸಮಯಪ್ರಜ್ಞೆ ಮೆರೆದ ಪ್ರದೀಪ್ ಹಾಗೂ ಕುಟುಂಬ ಸತತ 1 ತಾಸು ಆನೆ ಮರಿಯನ್ನು ಕಾಪಾಡಿಕೊಂಡು ತಮಿಳುನಾಡಿನ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ‌.

ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಆನೆ ಮಡಿಲಿಗೆ ಮರಿಯಾನೆಯನ್ನು ಸೇರಿಸಿದ್ದಾರೆ. ಮೆಟ್ಟೂರು ಜಲಾಶಯದ ಹಿನ್ನೀರು ದಾಟುವಾಗ ತಾಯಿಯಿಂದ ಬೇರ್ಪಟ್ಟಿದೆ ಎನ್ನಲಾಗುತ್ತಿದೆ. ಇನ್ನೂ ಇದು ಜನಿಸಿ ಕೇವಲ 2 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ