ರಾಮನವಮಿ ವೇಳೆ ಮಸೀದಿ ಮುಂದೆ ಡಿಜೆ: ಎರಡು ಗುಂಪುಗಳ ನಡುವೆ ಘರ್ಷಣೆ
ಲಕ್ನೋ: ರಾಮನವಮಿ ಶೋಭಾ ಯಾತ್ರೆ ವೇಳೆ ಉತ್ತರ ಪ್ರದೇಶದ ಲಕ್ನೋದ ಹಳ್ಳಿಯೊಂದರಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಪರಸ್ಪರ ಎರಡೂ ಗುಂಪುಗಳು ಕಲ್ಲು ತೂರಾಟ ನಡೆಸಿಕೊಂಡಿವೆ.
ಇಲ್ಲಿನ ಜಾಂಕಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಮಡಿಯಾವ್ ಗ್ರಾಮದಲ್ಲಿ ಮಧ್ಯಾಹ್ನ 1.30ಕ್ಕೆ ಈ ಘಟನೆ ನಡೆದಿದೆ. ಪರಸ್ಪರ ಕಲ್ಲು ತೂರಾಟ, ದೈಹಿಕ ಹಲ್ಲೆ, ಹೊಡೆದಾಟ ಸಂಭವಿಸಿದೆ.
ಮಸೀದಿ ಎದುರು ಸಮಿತ್ ಎಂಬ ವ್ಯಕ್ತಿಯೊಬ್ಬ 15ಕ್ಕೂ ಅಧಿಕ ಜನರೊಂದಿಗೆ ಡಿಜೆ ಹಾಕಿ ಡಾನ್ಸ್ ಮಾಡಿದ್ದು, ಮತ್ತೊಂದು ಗುಂಪನ್ನು ಕೆಣಕಿದ್ದಾರೆ ಎನ್ನಲಾಗಿದೆ. ಇದನ್ನು ಆಕ್ಷೇಪಿಸಿದ ವೇಳೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.
ಸುಮಾರು 10 ನಿಮಿಷಗಳ ಕಾಲ ನಡೆದ ವಾದ ವಿವಾದದ ಬಳಿಕ ಕಲ್ಲು ತೂರಾಟ, ದೈಹಿಕ ಹಲ್ಲೆ ಹಾಗೂ ಆಸ್ತಿ ನಾಶ ನಡೆದಿದೆ. ಮಾಹಿತಿ ತಿಳಿದ ಜಾಂಕಿಪುರಂ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























