ಮೋದಿ ಅವರಿಗೆ 75 ವರ್ಷ ಆದ ಬಳಿಕ ಸಿಎಂ ಬೊಮ್ಮಾಯಿಗೆ ಪ್ರಧಾನಿಯಾಗುವ ಅವಕಾಶವಿದೆ | ಲೇವಡಿ ಮಾಡಿದ ಲಕ್ಷ್ಮಣ್ ಸವದಿ - Mahanayaka
12:18 PM Wednesday 20 - August 2025

ಮೋದಿ ಅವರಿಗೆ 75 ವರ್ಷ ಆದ ಬಳಿಕ ಸಿಎಂ ಬೊಮ್ಮಾಯಿಗೆ ಪ್ರಧಾನಿಯಾಗುವ ಅವಕಾಶವಿದೆ | ಲೇವಡಿ ಮಾಡಿದ ಲಕ್ಷ್ಮಣ್ ಸವದಿ

laxman savadi
12/04/2023


Provided by

ಅಥಣಿ: ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆಯಲು ಮುಂದಾಗಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಣ್ ಸವದಿ, ಸಿಎಂ ಬೊಮ್ಮಾಯಿ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಮುಂದಿನ ದಿನಗಳಲ್ಲಿ ಸಿಎಂ ಬೊಮ್ಮಾಯಿಗೆ ಪ್ರಧಾನಿಯಾಗುವ ಅವಕಾಶವಿದೆ. ಸಿಎಂ ಬೊಮ್ಮಾಯಿರನ್ನ ಪ್ರಧಾನಿಯಾಗಿ ನೋಡುವ ಆಸೆ ಇದೆ. ಪ್ರಧಾನಿ ಆಗಲು ಯಾರೂ ತಪ್ಪಿಸಲ್ಲ ಅಂದುಕೊಂಡಿದ್ದೇನೆ.  ಮೋದಿ ಅವರಿಗೆ 75 ವರ್ಷ ಆದ ಬಳಿಕ ಸಿಎಂ ಬೊಮ್ಮಾಯಿಗೆ ಅವಕಾಶ ಸಿಗಬಹುದು ಎಂದು ವ್ಯಂಗ್ಯವಾಡಿದರು.

ಸಿಎಂ ಬೊಮ್ಮಾಯಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಆ ವೇಳೆ ನಾನು ಮತ್ತು ಸಿ.ಸಿ. ಪಾಟೀಲ್ ಬಿಜೆಪಿಗೆ ಸೇರಿಸಿದವು.  ನಮ್ಮಿಂದಾಗಿ ಅವರು ಬಿಜೆಪಿ ಸೇರಿ ಸಿಎಂ ಆದರು ಎಂದು ಲಕ್ಷ್ಮಣ್ ಸವದಿ ಹೇಳಿದರು.

ಇದೇ ವೇಳೆ ರಮೇಶ್ ಜಾರಕಿಹೊಳಿ ವಿರುದ್ದವೂ ಕಿಡಿಕಾರಿದ ಲಕ್ಷ್ಮಣ್ ಸವದಿ, ರಾಜ್ಯದಲ್ಲಿ ಗೆಲ್ಲಿಸುವ ತಾಕತ್ತು ಇರೋದು ರಮೇಶಣ್ಣನಿಗೆ ಮಾತ್ರ. ಅವರು ಸಾಹುಕಾರರು. ಬಲಾಢ್ಯರು ಎಂದು ಟಾಂಗ್ ಕೊಟ್ಟರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ