ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ತನ್ನ ತಮ್ಮನನ್ನೇ ಕೊಂದ ಅಣ್ಣ   - Mahanayaka

ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ತನ್ನ ತಮ್ಮನನ್ನೇ ಕೊಂದ ಅಣ್ಣ  

09/01/2021


Provided by

ಜೈಪುರ: ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನಸ್ಸಿಗೆ ಘಾಸಿ ಮಾಡಬಾರದು ಅದು ಅವರ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.  ಚಿಕ್ಕ ವಯಸ್ಸಿನಲ್ಲಿಯೇ ಮನಸ್ಸಿನ ಮೇಲೆ ಆದ ಘಾಸಿಯಿಂದಾಗಿ ಇಲ್ಲೊಂದು ದುರಂತವೇ ನಡೆದು ಹೋಗಿದೆ.

ಈ ಘಟನೆ ನಡೆದಿರುವುದು ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ.  ಬಾಲಕನೊಬ್ಬ ತನ್ನನ್ನು ಯಾವಾಗಲೂ ಹೀಯಾಳಿಸುತ್ತಿದ್ದ ತನ್ನ ಚಿಕ್ಕಪ್ಪನ ಮಗನ ಕುತ್ತಿಗೆಯನ್ನು ಸೀಳಿ ಆತನ ರಕ್ತ ಕುಡಿದ ಘಟನೆ ನಡೆದಿದೆ.

10 ವರ್ಷದ ಬಾಲಕ ಉತ್ತಮ್ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆತನ ದೊಡ್ಡಪ್ಪನ ಮಗ ಕೈಲಾಸ್ ಚಂದ್ ಆತನನ್ನು ಹತ್ಯೆ ಮಾಡಿದ್ದಾನೆ. ಶಾಲೆಗೆ ಹೊರಟಿದ್ದ ಉತ್ತಮ್ ನನ್ನು ಅಡ್ಡಗಟ್ಟಿದ ಕೈಲಾಸ್ ಆತನ ಜೊತೆಗೆ ಜಗಳ ಮಾಡಿದ್ದಾನೆ. ಈ ಸಂದರ್ಭ  ಸ್ಥಳೀಯರು ಮಕ್ಕಳ ಗಲಾಟೆ ಅಂದುಕೊಂಡು ವಿಡಿಯೋ ಮಾಡಿದ್ದಾರೆ.

ಗಲಾಟೆ ತೀವ್ರವಾಗಿ ಹೊಡೆದಾಟ ಆರಂಭವಾಗಿದ್ದು, ಆದರೂ ಸ್ಥಳೀಯರು ಬಿಟ್ಟಿ ಮಜಾ ತೆಗೆದುಕೊಂಡಿದ್ದಾರೆ. ಇದೇ ವೇಳೇ ಯಾರೂ ನಿರೀಕ್ಷಿಸದ ಘಟನೆ ಅಲ್ಲಿ ನಡೆದಿದ್ದು, ಕೈಲಾಸ್ ಉತ್ತಮ್ ಕತ್ತನ್ನು ಬ್ಲೇಡ್ ನಿಂದ ಇರಿದಿದ್ದು, ಆತನ ರಕ್ತವನ್ನು ಬಾಯಿಯಿಂದ ಹೀರಲು ಆರಂಭಿಸಿದ್ದಾನೆ.

ಕೈಲಾಸ್ ಗೆ ಅವರ ಚಿಕ್ಕಪ್ಪನ ಮೇಲೆ ಬಹಳಷ್ಟು ಕೋಪವಿತ್ತು. ಆತನ ಚಿಕ್ಕಪ್ಪ, ಕೈಲಾಸ್ ಚಿಕ್ಕ ವಯಸ್ಸಿನಲ್ಲಿರುವಾಗಲಿಂದಲೂ ಈತನನ್ನು ನಿನಗೆ ಏನು ಗೊತ್ತಿಲ್ಲ, ಯಾವುದಕ್ಕೂ ಪ್ರಯೋಜನವಿಲ್ಲದವನು ಎಂದೆಲ್ಲ ತಮಾಷೆ ಮಾಡುತ್ತಿದ್ದ. ಇದು ಕೈಲಾಸ್ ನ ಮನಸ್ಸಿನಲ್ಲಿ ಹಾಗೆಯೇ ದ್ವೇಷವಾಗಿ ಮಾರ್ಪಟ್ಟಿತ್ತು. ಇದೇ ಕಾರಣಕ್ಕಾಗಿ ಚಿಕ್ಕಪ್ಪನ ಮಗನನ್ನು ಹತ್ಯೆ ಮಾಡಲು ಆತ ನಿರ್ಧರಿಸಿದ್ದ. ಅದರಂತೆ ಶುಕ್ರವಾರ ಆತ ಹತ್ಯೆ ಮಾಡಿದ್ದಾನೆ.

ಹೊಡೆದಾಟ ನೋಡಿ ವಿಡಿಯೋ ಮಾಡಿಕೊಂಡು ಮಜಾ ಮಾಡುತ್ತಿದ್ದ ಸ್ಥಳೀಯರು,  ಹತ್ಯೆ ನಡೆಯುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದ್ದಾರೆ.

ಇತ್ತೀಚಿನ ಸುದ್ದಿ