ಮತ ಬೇಟೆ ಆರಂಭಿಸಿದ ಪ್ರಿಯಾಂಕ ಗಾಂಧಿ: ಕಾರಿನಿಂದ ಇಳಿದು ಜನರಿಗೆ ಹಸ್ತಲಾಘವ ನೀಡಿದ ಪ್ರಿಯಾಂಕ

ಚಾಮರಾಜನಗರ: ಚಾಮರಾಜನಗರದ ಹನೂರಲ್ಲಿ ಪ್ರಿಯಾಂಕ ಗಾಂಧಿ ಮತಬೇಟೆ ಆರಂಭಿಸಿದ್ದಾರೆ. ಅಣ್ಣ ರಾಹುಲ್ ಗಾಂಧಿ ಬೆನ್ನಲ್ಲೇ ಇಂದಿನಿಂದ ಚುನಾವಣಾ ಪ್ರಚಾರ ಅಖಾಡಕ್ಕೆ ಪ್ರಿಯಾಂಕಾ ಇಳಿದಿದ್ದಾರೆ.
ಹನೂರಲ್ಲಿ ಮಹಿಳೆಯರೊಟ್ಟಿಗೆ ಪ್ರಿಯಂಕಾ ಗಾಂಧಿ ಸಂವಾದ ನಡೆಸಲಿದ್ದಾರೆ. ಗಿರಿಜನ, ಬೇಡಗಂಪಣ ಮಹಿಳೆರ ಕಷ್ಟ, ಸಮಸ್ಯೆಗಳನ್ನು ಪ್ರಿಯಾಂಕ ಗಾಂಧಿ ಆಲಿಸಿದರು.
ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ 12 ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದಾರೆ. ಪ್ರಿಯಾಂಕಾ ಜೊತೆ ರಂದೀಪ್ ಸುರ್ಜೇವಾಲ, ಡಿ.ಕೆ.ಶಿವಕುಮಾರ್, ಹನೂರು ಕೈ ಅಭ್ಯರ್ಥಿ ನರೇಂದ್ರ, ಚಾಮರಾಜನಗರ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ, ಗುಂಡ್ಲುಪೇಟೆ ಅಭ್ಯರ್ಥಿ ಗಣೇಶ್ ಪ್ರಸಾದ್, ತಮಿಳುನಾಡು–ಕೇರಳ ಶಾಸಕರು ಭಾಗಿಯಾಗಿದ್ದಾರೆ.
ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಜನರಿಗೆ ಹಸ್ತಲಾಘವ ನೀಡಿ ನಮಸ್ಕಾರ ಹೇಳಿದರು. ಈ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು, ಮಹಿಳೆಯರು ಪ್ರಿಯಾಂಕ ಗಾಂಧಿ ಪರ ಘೋಷಣೆ ಹಾಕಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw