ಕ್ಷುಲ್ಲಕ ಕಾರಣಕ್ಕೆ ತಾಯಿ ಮಗನನ್ನು ಕೊಚ್ಚಿ ಕೊಂದ ಪಾಪಿ! - Mahanayaka

ಕ್ಷುಲ್ಲಕ ಕಾರಣಕ್ಕೆ ತಾಯಿ ಮಗನನ್ನು ಕೊಚ್ಚಿ ಕೊಂದ ಪಾಪಿ!

shanthamma yashvanth
28/04/2023


Provided by

ಮಂಡ್ಯ:  ಗದ್ದೆಗೆ ನೀರು ಹಾಯಿಸುವ ವಿಚಾರದಲ್ಲಿ ನಡೆದ ಜಗಳ ತಾಯಿ ಮಗನ ಬರ್ಬರ ಹತ್ಯೆಯಲ್ಲಿ ಅಂತ್ಯ ಕಂಡ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೆಗಡಹಳ್ಳಿಯಲ್ಲಿ ನಡೆದಿದೆ.

ಶಾಂತಮ್ಮ ಹಾಗೂ ಯಶವಂತ್ ಹತ್ಯೆಗೀಡಾದ ತಾಯಿ ಮಗ ಆಗಿದ್ದು,  ಏಪ್ರಿಲ್ 27ರಂದು ಮಧ್ಯಾಹ್ನ ಶಾಂತಮ್ಮ ಹಾಗೂ ಯಶವಂತ್ ಅವರು ಗದ್ದೆಗೆ ನೀರು ಹಾಯಿಸಲು ತೆರಳಿದ್ದಾರೆ. ಈ ವೇಳೆ ಗದ್ದೆಯ ಬಳಿಗೆ ಬಂದ ಮೈದುನ ಸತೀಶ್ ಎಂಬಾತ ನೀರಿನ ವಿಚಾರದಲ್ಲಿ ಜಗಳ ಆರಂಭಿಸಿದ್ದ.

ಸತೀಶ್ ಹಾಗೂ ಶಾಂತಮ್ಮ ನಡುವೆ  ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಸತೀಶ ಮಿಷನ್ ಮನೆಯಲ್ಲಿದ್ದ ಕುಡುಗೋಲಿನಿಂದ ಶಾಂತಮ್ಮನ ತಲೆ, ಎದೆ, ಕತ್ತು ಹಾಗೂ ಹೊಟ್ಟೆಯ ಭಾಗಕ್ಕೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಶಾಂತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ತಾಯಿ ರಕ್ಷಣೆಗೆ ಬಂದಿದ್ದ ಯಶವಂತನ ಮೇಲೆಯೂ ದಾಳಿ ನಡೆಸಿದ ಸತೀಶ್ ಆತನನ್ನೂ ಕೊಚ್ಚಿಕೊಂದಿದ್ದಾನೆ. ಬಳಿಕ ಪತ್ನಿ ಮಕ್ಕಳನ್ನು ತವರು ಮನೆಗೆ ಕಳುಹಿಸಿ,  ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಆರೋಪಿ ಸತೀಶನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ