ಮೋದಿ ರೋಡ್ ಶೋಗೆ ಸ್ಪೆಷಲ್‌ ಬುಲೆಟ್ ಪ್ರೂಫ್ ವಾಹನ - Mahanayaka
8:17 AM Wednesday 27 - August 2025

ಮೋದಿ ರೋಡ್ ಶೋಗೆ ಸ್ಪೆಷಲ್‌ ಬುಲೆಟ್ ಪ್ರೂಫ್ ವಾಹನ

bjp
28/04/2023


Provided by

ಬೆಂಗಳೂರು:‌ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರಕ್ಕೆ ಇದೇ ಏಪ್ರಿಲ್‌ 29ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಪ್ರಧಾನಿ ನಡೆಸಲಿರುವ ಮೆಗಾ ರೋಡ್‌ ಶೋಗಾಗಿ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ.

ಮೋದಿ ಪ್ರಚಾರಕ್ಕೆ ಎಸ್‌ಪಿಜಿ (SPG) ತಂಡ ಬೆಂಗಳೂರಿಗೆ ಸ್ಪೆಷಲ್ ಪ್ರೂಫ್ ವಾಹನ ಕಳುಹಿಸಿದೆ. ಆ ವಾಹನದಲ್ಲೇ ಮೋದಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಇದೇ ವಾಹನದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ಸುರಕ್ಷತಾ ದೃಷ್ಟಿಯಿಂದಾಗಿ ಈ ಬಾರಿ ಬುಲೆಟ್ ಪ್ರೂಫ್ ವಾಹನ ಸಿದ್ಧಪಡಿಸಿದ್ದು, ಈಗಾಗಲೇ ಬೆಂಗಳೂರಿಗೆ ಬಂದಿಳಿದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್‌ ಶೋ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 2 ಗಂಟೆಯಿಂದ ಮಾಗಡಿ ರಸ್ತೆ ಬಂದ್‌ ಆಗಲಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿರುವ ಮೋದಿ ಅವರು ಸಂಜೆ 4.30ಕ್ಕೆ ಇಲ್ಲಿನ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ ನೆಲಮಂಗಲದ ಬಿಐಇಸಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ನಂತರ ಬಿಐಇಸಿ ನಿಂದ ನೈಸ್‌ ರಸ್ತೆ ಮೂಲಕ ಮಾಗಡಿ ರಸ್ತೆಗೆ ಪ್ರಯಾಣ ಬೆಳೆಸಲಿದ್ದಾರೆ. ಮಾಗಡಿ ರಸ್ತೆಯಿಂದ ಸುಮ್ಮನಹಳ್ಳಿಯ ತನಕ ರೋಡ್ ಶೋ ನಡೆಸಲಿದ್ದಾರೆ.

ಮೋದಿ ಬರುವ 1 ಗಂಟೆಗೂ ಮುನ್ನವೇ ನೈಸ್‌ ರಸ್ತೆ ಸಂಚಾರವನ್ನೂ ಬಂದ್‌ ಮಾಡಲಾಗುತ್ತದೆ.
ಸುಮ್ಮನಹಳ್ಳಿ ರೋಡ್ ಶೋ ಬಳಿಕ ಗೊರಗುಂಟೆಪಾಳ್ಯ, ಮೇಖ್ರೀ ಸರ್ಕಲ್ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಶನಿವಾರ ರಾಜಭವನದಲ್ಲೇ ವಾಸ್ತವ್ಯ ಹೂಡಲಿರೋ ಮೋದಿ, ಭಾನುವಾರ ನಿಗದಿತ ಕಾರ್ಯಕ್ರಮ ಮುಗಿಸಿ ಅಂದು ಸಂಜೆ ದೆಹಲಿಗೆ ಮೋದಿ ಹಿಂದಿರುಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ