ಆನೆ ಮೇಲೆ ಕುಳಿತು ಪ್ರಚಾರ  ನಡೆಸುತ್ತಿದ್ದಾರೆ BSP ಅಭ್ಯರ್ಥಿ - Mahanayaka

ಆನೆ ಮೇಲೆ ಕುಳಿತು ಪ್ರಚಾರ  ನಡೆಸುತ್ತಿದ್ದಾರೆ BSP ಅಭ್ಯರ್ಥಿ

haramahesh
29/04/2023

ಚಾಮರಾಜನಗರ: ಚುನಾವಣಾ ಕಣ ದಿನೇದಿನೆ ರಂಗೇರುತ್ತಿದ್ದು ಅಭ್ಯರ್ಥಿಗಳ ವಿಭಿನ್ನ ಪ್ರಚಾರಕ್ಕೆ ಇಳಿದಿದ್ದಾರೆ. ಅಭ್ಯರ್ಥಿಗಳ ಕುಟುಂಬಸ್ಥರು ಅಖಾಡಕ್ಕೆ ಇಳಿದು ಮನೆ-ಮನೆಗೆ ಭೇಟಿ ಕೊಡುತ್ತಿದ್ದು ಚಾಮರಾಜನಗರ ಬಿಎಸ್ ಪಿ ಅಭ್ಯರ್ಥಿ ಒಂದು ಹೆಜ್ಜೆ ಮುಂದೆ ಹೋಗಿ ಆನೆ ಸವಾರಿ ಮಾಡುತ್ತಿದ್ದಾರೆ.

ಚಾಮರಾಜನಗರ BSP ಅಭ್ಯರ್ಥಿ ಹ.ರಾ.ಮಹೇಶ್ ಆನೆ ಮಾದರಿ ಪ್ರಚಾರ ರಥವನ್ನು ನಿರ್ಮಾಣ ಮಾಡಿಸಿಕೊಂಡಿದ್ದು ಆನೆ ಮೇಲೆ ಕುಳಿತು ಭರ್ಜರಿ ಪ್ರಚಾರ ನಡೆಸಿ ಗಮನ ಸೆಳೆಯುತ್ತಿದ್ದಾರೆ.

15 ಅಡಿ ಎತ್ತರದ ಆನೆ ಮೇಲೆ ಕುಳಿತು ಮತಬೇಟೆ ನಡೆಸಲಿದ್ದು ಮತದಾರರು ಒಂದು ಕ್ಷಣ ಆನೆ ಕಂಡು ಮುದಗೊಳ್ಳುವ ಜೊತೆಗೆ ನಿಂತು ಅಭ್ಯರ್ಥಿ ಮಾತು ಕೇಳಿ ಹೋಗುವಷ್ಟರ ಮಟ್ಟಿಗೆ ಆನೆ ಪ್ರಚಾರ ರಥ ವರ್ಕೌಟ್ ಆಗುತ್ತಿದೆ‌. ಹಳ್ಳಿ-ಹಳ್ಳಿಗಳಿಗೆ ಆನೆ ಪ್ರಚಾರ ರಥ ಲಗ್ಗೆ ಇಡುತ್ತಿದ್ದು ಒಟ್ಟಿನಲ್ಲಿ ವಿಭಿನ್ನವಾಗಿ ಮತ ಬೇಟೆ ನಡೆಸುತ್ತಿದ್ದಾರೆ. ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿರುವ ಚಾಮರಾಜನಗರದಲ್ಲಿ ಗಣನೀಯವಾಗಿ ಬಿಎಸ್ಪಿ ಅಭ್ಯರ್ಥಿ ಗುರುತಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ