ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಕಿಡಿ - Mahanayaka

ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಕಿಡಿ

somanna
29/04/2023


Provided by

ಚಾಮರಾಜನಗರ: ವರುಣದಲ್ಲಿ ಸೋಮಣ್ಣ ಗಲಾಟೆ ಮಾಡಿಸಿದ್ದು ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಸೋಮಣ್ಣ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಮತ್ತೆ ಯಾಕೆ ಈ ರೀತಿ ಮಾಡಿ ಚಿಕ್ಕವರಾಗ್ತಿದ್ದಾರೆ ಗೊತ್ತಿಲ್ಲ.ನಾವೇನೂ ಕಾಲು ಕರೆದುಕೊಂಡು ಹೋಗಿರಲಿಲ್ಲ ಎಂದು ಅವರು ಹೇಳಿದರು.

ಚಾಮರಾಜನಗರದ ಉಗನೇಯ್ಯನಹುಂಡಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸೋಮಣ್ಣ, ನಾವು ಪ್ರಚಾರಕ್ಕೆ ಹೋದ್ರೆ ರಸ್ತೆಗೆ ಅಡ್ಡಲಾಗಿ ನೊಗ ಇಡ್ತಾರೆ. ಆಚೆಗೆ ಹೋಗಬಾರದು ಅಂತಾರೆ. ಒಂದೇ ವರ್ಗದ ಜನ. ನಮಗೆ ಹುಚ್ಚು ಹಿಡಿದಿದ್ದೀಯಾ, ಹತಾಶರಾಗಿ ಈ ರೀತಿ ಮಾತಾಡ್ತಿದ್ದಾರೆ. ನೀವೂ ಗೆಲ್ಲೊದಾದ್ರೆ ಇದೆಲ್ಲಾ ನಿಮಗೆ ಯಾಕೆ ಬೇಕು. ಪೊಲೀಸ್ ನವರಿಗೆ ಹಿಡಿದುಕೊಟ್ಟರು, ಪೊಲೀಸರು ಬಿಟ್ಟು ಕಳಿಸ್ತಾರೆ. ಅವರ ಮೇಲೆ 326 ರ ಅಡಿ ಪ್ರಕರಣ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏನಾದ್ರೂ ಪಿತೂರಿ ಮಾಡಲಿ, ಭಗವಂತ, ಚಾಮುಂಡಿ ತಾಯಿ ಇದ್ದಾರೆ. ಅಲ್ಲದೇ ಕ್ಷೇತ್ರದ ಜನರಿದ್ದಾರೆ. ನನ್ನ ಸೇವೆ ಬೇಕು ಅಂದ್ರೆ ಕ್ಷೇತ್ರದ ಜನರು ಸಹಾಯ ಮಾಡ್ತಾರೆ. ಮಾಡ್ದೆ ಇದ್ರೆ ನಂಗೆನೂ ಬೇಜಾರು ಇಲ್ಲ ಎಂದು ಅವರು ಹೇಳಿದರು.

ವರುಣದಲ್ಲಿ ಪ್ರಚಾರಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಒಂದು ದಿನ ಅಲ್ಲ, ದಿನವೂ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ಅವರು ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ಸೋಮಣ್ಣ ಹೇಳಿದರು.

ಪ್ರತಾಪ್ ಸಿಂಹರಿಂದಲೇ ಗಲಾಟೆ ಯಾಗ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನಂಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ. ವಾಸ್ತವಾಂಶ ಇರೋದನ್ನು ಮಾತಾಡ್ತಾರೆ.ನಿಮ್ಮವರೇ ಜಗಳ ಮಾಡಿಸ್ತಿರೋದು. ಅವರು ಬಿಟ್ರೆ ಬೇರೆ ಯಾರೂ ಇಲ್ಲ. ನ್ಯಾಯಸಮ್ಮತ ಚುನಾವಣೆ ನಡೆಯಲಿ, 10 ನೇ ತಾರೀಖು ತೀರ್ಮಾನವಾಗಲಿ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಒಂದು ಬಾರಿ ಕ್ಷೇತ್ರದಲ್ಲಿ ಓಡಾಡಲಿ. ಅದೆಷ್ಟು ಚೆನ್ನಾಗಿ ರಸ್ತೆಗಳಿವೆ ನೋಡಲಿ. ಯಾವ ರೀತಿ ಅವ್ಯವಸ್ಥೆಯಿದೆ ನೋಡಲಿ. ಯಾವ ರೀತಿ ಜನರು ಒದ್ದಾಡ್ತಿದ್ದಾರೆ ಎಂದು ನೋಡಲಿ. ನಾನು ಒಬ್ಬನೇ ಅವರ ಜೊತೆಗೆ ಬರ್ತೀನಿ ಹೋಗೋಣ. ಸಿದ್ದರಾಮಯ್ಯ ಕರೆದ್ರೆ ಹೋಗಲೂ ಸಿದ್ದ,ಹೋಗಿ ಸುತ್ತಾಡೋಣ. ಅವರ ಮಾಡಿರುವ ಕೆಲಸ ಅವರಿಗೆ ತೃಪ್ತಿ ಕೊಟ್ಟಿದೆ ಅನ್ಸಿದ್ರೆ,ಅವರಿಗೆ ನಮಸ್ಕಾರ ಮಾಡಿ ನಾನು ಏನೂ ಮಾತಾಡಲ್ಲ.

ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ. ಜನರು ತೀರ್ಮಾನ ಮಾಡ್ತಾರೆ. ಹಿಂದೆ ನೀವೂ ಸೋತಾಗ ಮಂತ್ರಿಯಾಗಿದ್ರಷ್ಟೇ. ಇವತ್ತು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ ನಿಂತಿದ್ದೀರಾ. ಸಿದ್ದರಾಮಯ್ಯ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದು ಬಿಟ್ಟು, ವಾಸ್ತಾವಾಂಶಕ್ಕೆ ಗಮನ ಕೊಟ್ರೆ ಒಳ್ಳೇಯದು ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ