ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ, ಜನರ ಭಾವನೆ ಹಾಗೂ ದ್ವನಿಯನ್ನು ಗ್ರಹಿಸಲಾಗಿದೆ: ಸಿಎಂ ಬೊಮ್ಮಾಯಿ - Mahanayaka

ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ, ಜನರ ಭಾವನೆ ಹಾಗೂ ದ್ವನಿಯನ್ನು ಗ್ರಹಿಸಲಾಗಿದೆ: ಸಿಎಂ ಬೊಮ್ಮಾಯಿ

c m basavara bomayi
01/05/2023


Provided by

ಬೆಂಗಳೂರು: ಮೇ01:ಜನರ ಭಾವನೆ ಹಾಗೂ ಧ್ವನಿಯನ್ನು ಗ್ರಹಿಸಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.ಅವರು ಇಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಅಭಿವೃದ್ಧಿಗೆ ಆದ್ಯತೆ

ಕೊವಿಡ್ ಬಗ್ಗೆ ನಾವು ಯಾರೂ ಯೋಚಿಸಿರಲಿಲ್ಲ. ಅದರ ಅನುಭವದ ಆಧಾರದ ಮೇಲೆ ಈ ಪ್ರಣಾಳಿಕೆ ಮಾಡಿದ್ದೇವೆ.ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರಿಗೇ ಈಗಾಗಲೇ ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಒಂದು ಸಾವಿರ ಕೃಷಿ ಉತ್ಪಾದನಾ ಕೇಂದ್ರಗಳನ್ನು ತೆರೆಯುವುದು‌, ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಸಂಕಲ್ಪ, ಸಿರಿ ಧಾನ್ಯಕ್ಕೆ ಅತಿ ಹೆಚ್ಚು ಒತ್ತು‌ಕೊಡುವ ಕೆಲಸ ಮಾಡಲಾಗಿದೆ.

ನಗರ ಪ್ರದೇಶದಲ್ಲಿ 5 ಲಕ್ಷ ಮನೆ, ಗ್ರಾಮೀಣ ಪ್ರದೇಶಗಳಲ್ಲಿ 10 ಲಕ್ಷ ಮನೆ ‌ನಿರ್ಮಾಣ ಪ್ರತಿ ಮನೆ ನಿರ್ಮಾಣ 5 ಲಕ್ಷ ರೂ. ನೀಡಲಾಗುವುದು.ಪಡಿತರದಲ್ಲಿ ಅಕ್ಕಿಯ ಜೊತೆಗೆ ಐದು ಕೆಜಿ ಸಿರಿ ಧಾನ್ಯ ನೀಡಲಾಗುವುದು. ಅರ್ಧ ಲೀ ಟರ್ ಹಾಲು ಕೊಡಲಾಗುವುದು. ಬಿಪಿಎಲ್ ಕಾರ್ಡ್ ದಾರರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿ 10 ಲಕ್ಷ ರೂ ವಿಮೆ ನೀಡಲಾಗುವುದು.ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ ಗುರಿ

ಜನರಿಂದ ಜನರಿಗೋಸ್ಕರ ಇರುವ ಪ್ರಜಾ ಪ್ರಣಾಳಿಕೆ ಇದಾಗಿದೆ. ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ (ವೈಬ್ರಂಟ್ ಸ್ಟೇಟ್) ಮಾಡುವ ಗುರಿ ನಮ್ಮದು. ಪ್ರಧಾನ ಮಂತ್ರಿ ಯ ಐದು ಟ್ರಿಲಿಯನ್ ಡಾಲರ್ ಎಕಾನಮಿಯ ಗುರಿ ಮುಟ್ಟಲು ಐಟಿ ಬಿಟಿ, ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದು ಜನರ ಜನಪರ ಪ್ರಣಾಳಿಕೆ ಇದಕ್ಕೆ ಕರ್ನಾಟಕದ ಜನರು ಗಮನಿಸಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ