ಬಜರಂಗದಳ ನಿಷೇಧ ವಿಚಾರ: ಇವರ ಮನೇಲಿ ಪೂಜೆ ಮಾಡಲ್ವಾ? ಕುಂಕುಮ ಹಾಕಲ್ವಾ?: ಸೋಮಣ್ಣ ವಾಗ್ದಾಳಿ
ಚಾಮರಾಜನಗರ: ಬಜರಂಗದಳ ನಿಷೇಧಿಸುತ್ತೇವೆಂದು ಹೇಳುವ ಕಾಂಗ್ರೆಸ್ ಪಕ್ಷದ ವಿರುದ್ದ ಬಿಜೆಪಿಯ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ರಾಮಸಮುದ್ರ ಬಡಾವಣೆಯ ವಿವಿಧ ವಾರ್ಡುಗಳಲ್ಲಿ ಬುಧವಾರ ಬೆಳಿಗ್ಗೆ 10:30ರಲ್ಲಿ ಮತಯಾಚನೆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದವರ ಬಜರಂಗ ದಳ ನಿಷೇಧಿಸುವ ವಿಚಾರವಾಗಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದವರು ಬಾಯಿಗೆ ಬಂದಂತೆ ಮಾತಾಡ್ತಾ ಇದ್ದಾರೆ. ಇದೇನಾ 75 ವರ್ಷ ಆಡಳಿತ ನಡೆಸಿದವರ ರೀತಿ? ಎಂದು ಪ್ರಶ್ನಿಸಿದರು.
ಸತ್ಸಂಪ್ರದಾಯಗಳು ಭಾರತೀಯರ ಕೊಡುಗೆಯಾಗಿದೆ. ರಾಮನ ಭಕ್ತ ಹನುಂತನೂ ಬೇಡ ಅಂದ್ರೆ ಹೇಗೆ? ಇವರ ಮನೇಲಿ ಪೂಜೆ ಮಾಡಲ್ವಾ? ಕುಂಕುಮ ಹಾಕಲ್ವಾ? ವಿಭೂತಿ ಬಳಕೊಳ್ವಾ? ಇದೇನೆದು ಇವರು ದಿನಕ್ಕೊಂದು ರೀತಿ ಆಡ್ತಾರೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























