ಇಂದು BVS ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರ ಜನ್ಮ ದಿನಾಚರಣೆ, ಬುದ್ಧಪೂರ್ಣಿಮೆ ಪ್ರಯುಕ್ತ ಗಾಯನ ಕಾರ್ಯಕ್ರಮ - Mahanayaka
6:19 PM Wednesday 20 - August 2025

ಇಂದು BVS ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರ ಜನ್ಮ ದಿನಾಚರಣೆ, ಬುದ್ಧಪೂರ್ಣಿಮೆ ಪ್ರಯುಕ್ತ ಗಾಯನ ಕಾರ್ಯಕ್ರಮ

bvs
05/05/2023


Provided by

ಮೈಸೂರು: ಭಾರತೀಯ ವಿದ್ಯಾರ್ಥಿ ಸಂಘ(BVS) ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್, ಮಹಾಶರಣ ಬಸವಣ್ಣನವರ ಜನ್ಮದಿನಾಚರಣೆ ಹಾಗೂ ಬುದ್ಧಪೂರ್ಣಿಮೆಯ ಪ್ರಯುಕ್ತ ಬುದ್ಧಗೀತೆ, ವಚನ ಗಾಯನ ಮತ್ತು ಧ್ಯಾನ ಕಾರ್ಯಕ್ರಮವು  ಮೈಸೂರಿನ ಅಕ್ಕ ಐಎಎಸ್ ಅಕಾಡೆಮಿಯಲ್ಲಿ ಇಂದು(ಮೇ 5) ಸಂಜೆ 5 ಗಂಟೆಗೆ ನಡೆಯಲಿದೆ.

ಮೈಸೂರಿನ ನ್ಯೂ ಕಾಂತರಾಜ ಅರಸ್ ರಸ್ತೆಯ ಕವಿತಾ ಬೇಕರಿ ಸರ್ಕಲ್ ಬಳಿಯ ಅಕ್ಕ ಐಎಎಸ್ ಅಕಾಡೆಮಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ  ಬೆಂಗಳೂರಿನ ಪೂಜ್ಯ ನ್ಯಾನಲೋಕ ಭಂತೆ ಅವರು ದಿವ್ಯ ಸಾನಿಧ್ಯ ವಹಿಸಿ ಧಮ್ಮ ಪ್ರವಚನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಮಹೇಂದ್ರ ಎಸ್.ರಂಗದಾಸ್, ಸೋಸಲೆ ಗಂಗಾಧರ್, ಡಾ.ಶ್ಯಾಮ್ ಪ್ರಸಾದ್, ಡಾ.ಶಿವಕುಮಾರ್, ಜಯಶಂಕರ ಮೇಸ್ತ್ರಿ, ನಾರಾಯಣ ಸ್ವಾಮಿ, ಡಾ.ಪೂರ್ಣಿಮ, ವಿಜುವಿಸ್ಮಿತ, ಶುಭಶ್ರೀ, ಋತ್ವಿಕ್ ಸಿ.ರಾಜ್, ಬದನವಾಳು ಸಿದ್ದೇಶ್ವರ್, ವಿಶ್ವನಾಥ್ ಚಂಗಚಹಳ್ಳಿ ಅವರು ಹಾಡಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ