ಅಭ್ಯರ್ಥಿ ಆಗುವ ಜೊತೆಗೆ ಚಾಮರಾಜನಗರ ಮತದಾರನಾದ ಸೋಮಣ್ಣ!! - Mahanayaka

ಅಭ್ಯರ್ಥಿ ಆಗುವ ಜೊತೆಗೆ ಚಾಮರಾಜನಗರ ಮತದಾರನಾದ ಸೋಮಣ್ಣ!!

v somanna
08/05/2023


Provided by

ಚಾಮರಾಜನಗರ: ವಿ.ಸೋಮಣ್ಣ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಚ್ಚರಿ ಅಭ್ಯರ್ಥಿಯಾಗುವ ಜೊತೆಗೆ ಜಿಲ್ಲೆಯ ಮತದಾರರ ಪಟ್ಟಿಗೂ ಸೇರಿಕೊಂಡಿದ್ದಾರೆ.

ಹೌದು…, ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿದ್ದ ವಿ.ಸೋಮಣ್ಣ ಚಾಮರಾಜನಗರ ಅಭ್ಯರ್ಥಿ ಆದ ಬಳಿಕ ಚಾಮರಾಜನಗರ ಮತದಾರರ ಪಟ್ಟಿಗೆ ತಮ್ಮ ಹೆಸರು ಹಾಗೂ ಪತ್ನಿ ಶೈಲಜಾ ಹೆಸರನ್ನು ಸೇರ್ಪಡೆ ಮಾಡಿದ್ದು ಚಾಮರಾಜನಗರದ ಶಂಕನಪುರ ಬಡಾವಣೆಯ ಮನೆ ವಿಳಾಸ ಕೊಟ್ಟಿದ್ದಾರೆ.

ತಮ್ಮ ಪರವಾಗಿ ಮತ ಚಲಾಯಿಸಿಕೊಳ್ಳುವ ಜೊತೆಗೆ ಹೊರಗಿನ ಅಭ್ಯರ್ಥಿ ಎಂಬ ಮೂದಲಿಕೆಗೆ ಸೋಮಣ್ಣ ಠಕ್ಕರ್ ಕೊಟ್ಟಿದ್ದು ಚಾಮರಾಜನಗರದಲ್ಲೇ ಇರುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ.

ಚಾಮರಾಜನಗರ ಅಭ್ಯರ್ಥಿ ಆದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಲವಕಾಶ ಇದ್ದ ಹಿನ್ನೆಲೆಯಲ್ಲಿ ನಾನು ಹಾಗೂ ನನ್ನ ಶ್ರೀಮತಿ ಇಲ್ಲಿಗೆ ಮತದಾನವನ್ನು ವರ್ಗಾಯಿಸಿಕೊಂಡಿದ್ದೇನೆ,ನಾನಿದ್ದುದು ವಿಜಯನಗರ, ಕ್ಷೇತ್ರ ಗೋವಿಂದರಾಜನಗರ, ಬಿನ್ನಿಪೇಟೆ ಆಗಿತ್ತು, ನನ್ನ ಪರವಾಗಿ ನಾನು 3–4 ಬಾರಿಯಷ್ಟೇ ಮತ ಚಲಾಯಿಸಿಕೊಂಡಿರುವುದು, ಈ ಬಾರಿ ಚಾಮರಾಜನಗರದಲ್ಲಿ ಮತ ಚಲಾಯಿಸಿಸುತ್ತೇನೆ ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ