ಜೀವಂತ ನವಿಲಿನ ಗರಿಯನ್ನು ಕಿತ್ತು ಚಿತ್ರ ಹಿಂಸೆ ನೀಡಿದ ಯುವಕ: ವಿಡಿಯೋ ವೈರಲ್ - Mahanayaka

ಜೀವಂತ ನವಿಲಿನ ಗರಿಯನ್ನು ಕಿತ್ತು ಚಿತ್ರ ಹಿಂಸೆ ನೀಡಿದ ಯುವಕ: ವಿಡಿಯೋ ವೈರಲ್

madhyapradesh
21/05/2023


Provided by

ಮಧ್ಯಪ್ರದೇಶ: ಜೀವಂತ ನವಿಲಿನ ಗರಿಯನ್ನು ಕಿತ್ತು ವ್ಯಕ್ತಿಯೋರ್ವ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.

ಮಧ್ಯಪ್ರದೇಶದ ಕಟ್ನಿ ಗ್ರಾಮದ ಅತುಲ್‌ ಎಂಬಾತ ಈ ದುಷ್ಕೃತ್ಯವನ್ನು ಎಸಗಿದ್ದು, ನವಿಲನ್ನು ಹಿಡಿದು ಜೀವಂತವಾಗಿಯೇ ಅದರ ಗರಿಯನ್ನು ಕಿತ್ತು ಕಿತ್ತು ತೆಗೆದು ವ್ಯಕ್ತಿ ವಿಕೃತ ಆನಂದ ಪಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಕೃತ್ಯದ ವೇಳೆ ಆತನ ಸ್ನೇಹಿತೆ ಪಕ್ಕದಲ್ಲೇ ಕುಳಿತಿದ್ದಳು. ಜೀವಂತ ನವಿಲಿನ ಗರಿಯನ್ನು ಕಿತ್ತು ವಿಡಿಯೋ ಮಾಡಿಕೊಂಡಿರುವ ಯುವಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ನವಿಲಿಗೆ ಈ ರೀತಿಯ ಚಿತ್ರ ಹಿಂಸೆ ನೀಡಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ