ಯಡಿಯೂರಪ್ಪ ಸಿಡಿ ಬಿಡುಗಡೆ ಆಗಲಿ, ಯಾವ ಪಾತ್ರ ಮಾಡಿದ್ದಾರೆ ನೋಡೋಣ ಎಂದ ಕಾಂಗ್ರೆಸ್ ಮುಖಂಡ! - Mahanayaka
10:04 AM Tuesday 27 - January 2026

ಯಡಿಯೂರಪ್ಪ ಸಿಡಿ ಬಿಡುಗಡೆ ಆಗಲಿ, ಯಾವ ಪಾತ್ರ ಮಾಡಿದ್ದಾರೆ ನೋಡೋಣ ಎಂದ ಕಾಂಗ್ರೆಸ್ ಮುಖಂಡ!

15/01/2021

ತುಮಕೂರು: ಯಡಿಯೂರಪ್ಪ ಅವರ ಕುರಿತಾದ ಸಿಡಿ ವಿಚಾರ ಇದೀಗ ರಾಜ್ಯದಲ್ಲಿ ಚರ್ಚೆಯ ವಿಚಾರವಾಗಿದ್ದು, ಈ ಸಂಬಂಧ ಕಾಂಗ್ರೆಸ್ ಮುಖಂಡ ಟಿ.ಬಿ.ನಾಗರಾಜ್ ಅವರು ಹೇಳಿಕೆ ನೀಡಿದ್ದು, ಬಿಜೆಪಿ ಮುಖಂಡರ ಕಾಲೆಳೆದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿ.ಬಿ.ಜಯಚಂದ್ರ,   ಬಸನಗೌಡ ಪಾಟೀಲ್ ಯತ್ನಾಳ್, ತನ್ನ ಬಳಿಯಲ್ಲಿ ಸಿಡಿ ಇರುತ್ತಿದ್ದರೆ ತಾನು ಡಿಸಿಎಂ ಆಗುತ್ತಿದ್ದರೆ ಎಂದು ಹೇಳಿದ್ದಾರೆ. ಅವರು ಇಷ್ಟೆಲ್ಲ ಹೇಳಿದ ಬಳಿಕ ಸಿಡಿ ಹೊರ ಬಂದೇ ಬರುತ್ತದೆ ಹೇಳಿದ್ದಾರೆ.

ನಮ್ಮ ಸ್ನೇಹಿತ ಎಚ್.ವಿಶ್ವನಾಥ್ ಬಳಿಯಲ್ಲಿ ಸಿಡಿ ಇದ್ದೇ ಇರುತ್ತದೆ. ಅದರಲ್ಲಿ ಏನೇನಿದೆ? ಯಾರ್ಯಾರು ಯಾವ ಪಾತ್ರ ಮಾಡಿದ್ದಾರೆ ಎನ್ನುವುದನ್ನು ಆಮೇಲೆ ನೋಡೋಣ ಎಂದು ಅವರು ವ್ಯಂಗ್ಯ ಮಾಡಿದರು

ಬಿಜೆಪಿ ಮುಖಂಡರೇ ಈ ಸಿಡಿ ವಿಚಾರವಾಗಿ ಇಷ್ಟೊಂದು ನೇರವಾಗಿ ಮಾತನಾಡುತ್ತಿದ್ದಾರೆ ಎಂದಾದರೆ, ಆ ಸಿಡಿಯಲ್ಲಿ ಏನೋ ಇದೆ. ಅದು ಹೊರಗೆ ಬರಲು ಆರಂಭವಾಗಿದೆ ಎಂದು ಜಯಚಂದ್ರ ಅನುಮಾನ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ