ಕರ್ಣನ್, ಜೈ ಭೀಮ್’ ಸಿನಿಮಾ ಜಾತಿ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ?: ನಟ ಚೇತನ್‌ ಪ್ರಶ್ನೆ - Mahanayaka
7:35 AM Saturday 13 - September 2025

ಕರ್ಣನ್, ಜೈ ಭೀಮ್’ ಸಿನಿಮಾ ಜಾತಿ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ?: ನಟ ಚೇತನ್‌ ಪ್ರಶ್ನೆ

chethan ahimsa
29/05/2023

ಬೆಂಗಳೂರು: ʻದಿ ಕೇರಳ ಸ್ಟೋರಿʼ ಅದೊಂದು ಪ್ರಾಪಗಾಂಡ ಸಿನಿಮಾ ಎಂದು ಟೀಕಿಸಿದ್ದ ನಟ ಕಮಲ್‌ ಹಾಸನ್‌ ಹೇಳಿಕೆಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌  ಪ್ರತಿಕ್ರಿಯಿಸಿದ್ದಾರೆ.


Provided by

ಈ ಕುರಿತು ತಮ್ಮ ಫೇಸ್‌ ಬುಕ್‌ ವಾಲ್‌ ನಲ್ಲಿ ಬರೆದುಕೊಂಡಿರುವ ನಟ, ‘ದಿ ಕೇರಳ ಸ್ಟೋರಿ’ಗೆ ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, ‘ನಾನು ಪ್ರಾಪಗಾಂಡ ಚಿತ್ರಗಳ ವಿರುದ್ಧ ಇದ್ದೇನೆ’ ಎಂದಿದ್ದಾರೆ. ನಾವು ರಾಜಕೀಯವಾಗಿ/ಸೈದ್ಧಾಂತಿಕವಾಗಿ ವಿರೋಧಿಸುವುದನ್ನು ಪ್ರಾಪಗಾಂಡ ಎಂದು ಕರೆಯುತ್ತೇವೆ. ‘ಕರ್ಣನ್’ ಮತ್ತು ‘ಜೈ ಭೀಮ್’ ಅನ್ನು ಜಾತಿ ವಿರೋಧಿ ಅಥವಾ ಪೊಲೀಸ್ ವಿರೋಧಿ ಪ್ರಾಪಗಾಂಡ ಎಂದು ಪರಿಗಣಿಸಬಹುದಲ್ಲವೇ? ಬಲವಾದ ಪ್ರಜಾಪ್ರಭುತ್ವಕ್ಕಾಗಿ, ವಿಭಿನ್ನ ಸಿದ್ಧಾಂತಗಳು ಕೂಡ ಅಸ್ತಿತ್ವದಲ್ಲಿ ಇರಬೇಕು/ ಇರುತ್ತವೆ ಎಂದು ಹೇಳಿದ್ದಾರೆ.

ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ಕಮಲ್‌ ಹಾಸನ್‌, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ