ತನ್ನ ಇಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ತಂದೆ! - Mahanayaka
9:30 PM Thursday 16 - October 2025

ತನ್ನ ಇಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ತಂದೆ!

16/01/2021

ಮುಂಬೈ: ಜನ್ಮ ನೀಡಿದ ತಂದೆಯೇ ತನ್ನ ಅವಳಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆಯೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


Provided by

ತನ್ನ ಅವಳಿ ಮಕ್ಕಳ ಮೇಲೆ ನಾಲ್ಕು ವರ್ಷಗಳಿಂದಲೂ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆದರೆ, ತಮ್ಮ ತಂದೆಯ ಕೃತ್ಯವನ್ನು ಹೇಳಿಕೊಳ್ಳಲು ಸಾಧ್ಯವಾಗದೇ ಮಕ್ಕಳು ಆತನ ಕೃತ್ಯಗಳನ್ನು ಸಹಿಸಿಕೊಂಡಿದ್ದರು.  ಕೆಲವು ವರ್ಷಗಳ ಹಿಂದೆ  ಓರ್ವಳು ಮಗಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಈ ಸಂದರ್ಭ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಸೋನೋಗ್ರಾಫಿ ಮಾಡಿಸುವಂತೆ ವೈದ್ಯರು ಹೇಳಿದ್ದರು. ಆದರೆ ಈ ವಿಚಾರ ತನ್ನ ಪತ್ನಿಗೆ ತಿಳಿಯಬಾರದು ಎಂದು ಆರೋಪಿ , ವೈದ್ಯರು ನೀಡಿದ ವರದಿಯನ್ನು ಸುಟ್ಟು ಹಾಕಿದ್ದಾನೆ.

ಒಂದು ದಿನ ಪತ್ನಿಯು ಹೊರಗೆ ಹಾಲ್ ನಲ್ಲಿ ಮಲಗಿದ್ದು, ರಾತ್ರಿ ಸುಮಾರು 2 ಗಂಟೆಯ ಹೊತ್ತಿಗೆ ಮಗಳು ಅಳುವುದು ಕೇಳಿ, ಆಕೆಯ ರೂಮ್ ಗೆ ತಾಯಿ ಹೋಗಿದ್ದಾಳೆ, ಹೋದಾಗ ಆಕೆಯ ತಂದೆಯ ಕೃತ್ಯವನ್ನು ತಿಳಿಸಿದ್ದಾಳೆ. ಈ ವೇಳೆ ಮತ್ತೊಬ್ಬಳು ಮಗಳು ಕೂಡ ತಂದೆ ತನ್ನ ಮೇಲೂ ದುಷ್ಕೃತ್ಯ ನಡೆಸಿದ್ದಾನೆ ಎಂದು ತಿಳಿಸಿದ್ದಾಳೆ. ಈ ಸಂಬಂಧ ತನ್ನ ಪತಿಯ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ.

ಈ ದಂಪತಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಬ್ಬರು ಅವಳಿ ಜವಳಿಯಾಗಿದ್ದಾರೆ.  ಪತಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದು, ತಂದೆಯ ಸ್ಥಾನಕ್ಕೆ ಕಳಂಕ ತಂದಿದ್ದಾನೆ.

ಇತ್ತೀಚಿನ ಸುದ್ದಿ