ಜಪಾನ್ ಗೆ ತಲೆನೋವಾದ ಜನಸಂಖ್ಯೆ ಪ್ರಮಾಣ ಇಳಿಕೆ..! - Mahanayaka
8:51 PM Wednesday 20 - August 2025

ಜಪಾನ್ ಗೆ ತಲೆನೋವಾದ ಜನಸಂಖ್ಯೆ ಪ್ರಮಾಣ ಇಳಿಕೆ..!

02/06/2023


Provided by

ಜಪಾನ್‌ ದೇಶದಲ್ಲಿ ಇದೀಗ ಜನಸಂಖ್ಯೆ ಬಿಕ್ಕಟ್ಟು ಶುರುವಾಗಿದೆ. ಅಂದರೆ ಇಲ್ಲಿ ಜನಸಂಖ್ಯೆ ಕಡಿಮೆ ಇದೆ ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಜನನ ಪ್ರಮಾಣವು 2022ರಲ್ಲಿ ಸತತ ಏಳನೇ ವರ್ಷಕ್ಕೆ ದಾಖಲೆಯ ಮಟ್ಟಕ್ಕೆ ಕುಸಿದಿದೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.

ಜನಸಂಖ್ಯೆಯು ಕುಗ್ಗುತ್ತಿರುವಾಗ ಮತ್ತು ವೇಗವಾಗಿ ವಯಸ್ಸಾಗುತ್ತಿರುವುದನ್ನು ತಡೆಯಲು ಸಾಧ್ಯವಾಗದೇ ಇರುವುದೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಜಪಾನ್‌ ನಲ್ಲಿ ನವಜಾತ ಶಿಶುಗಳ ಸಂಖ್ಯೆಯು ಕಳೆದ ವರ್ಷ 5% ರಷ್ಟು ಕುಸಿದು 770,747 ಕ್ಕೆ ತಲುಪಿದೆ. ಆದರೆ ಸಾವಿನ ಸಂಖ್ಯೆ 9% ರಷ್ಟು ಹೆಚ್ಚಾಗಿ 1.57 ಮಿಲಿಯನ್‌ಗೆ ತಲುಪಿದೆ. ಕಳೆದ ವರ್ಷ ಜಪಾನ್‌ನಲ್ಲಿ 47,000 ಕ್ಕೂ ಹೆಚ್ಚು ಸಾವುಗಳು ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿವೆ.

ಸಂತಾನೋತ್ಪತ್ತಿ ದರ ಅಥವಾ ಜೀವಿತಾವಧಿಯಲ್ಲಿ ಮಹಿಳೆಗೆ ಜನಿಸಿದ ಮಕ್ಕಳ ಸರಾಸರಿ ಸಂಖ್ಯೆ 1.2565 ಆಗಿತ್ತು. ಇದು 2005ರ ಜನಸಂಖ್ಯೆಗೆ ಈ ಹಿಂದಿನ ಜನಸಂಖ್ಯೆಗೆ (1.2601) ರೊಂದಿಗೆ ಹೋಲಿಸಿದರೆ, ದೇಶದಲ್ಲಿ ಗಣನೀಯವಾಗಿ ಜನಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಇದೀಗ 2.07 ದರಕ್ಕಿಂತ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಜಪಾನ್​​ ಅಧ್ಯಕ್ಷ ಫ್ಯೂಮಿಯೊ ಕಿಶಿಡಾ ಅವರು ಮಕ್ಕಳ ಆರೈಕೆ ಮತ್ತು ಪೋಷಕರಿಗೆ ಬೆಂಬಲ ನೀಡುವ ಇತರ ಕ್ರಮಗಳಿಗಾಗಿ ವರ್ಷಕ್ಕೆ 3.5 ಟ್ರಿಲಿಯನ್ ಯೆನ್ ಖರ್ಚು ಮಾಡಲು ಯೋಚಿಸಿದ್ದಾರೆ.
2030ರ ವೇಳೆಗೆ ಯುವಕರ ಜನಸಂಖ್ಯೆ ಕಡಿಮೆಯಾಗಬಹುದು ಎಂದು ತಿಳಿಸಿದ್ದಾರೆ. 2030ರವರೆಗೆ ಪ್ರಮುಖ ಮಟ್ಟದಲ್ಲಿ ಜನ ಸಂಖ್ಯೆ ಕಡಿಮೆ ಆಗಬಹುದು. ಅದಕ್ಕಾಗಿ ಇಂದಿನಿಂದಲೇ ಅದನ್ನು ತಪ್ಪಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಜಪಾನ್‌ನಲ್ಲಿ ಹೆಚ್ಚಿನ ಜನರು ಮದುವೆಯಾಗುತ್ತಿಲ್ಲ. ಮದುವೆಯಾದರು ಮಕ್ಕಳು ಮಾಡಿಕೊಳ್ಳುವ ಆಸಕ್ತಿ ತೋರುತ್ತಿಲ್ಲ. ಇದು ದೇಶಕ್ಕೆ ದೊಡ್ಡ ತಲೆ ನೋವಾಗಿದೆ. ಮತ್ತೊಂದು ಕಡೆ ಕೋವಿಡ್ ನಿಂದ ಹೆಚ್ಚಿನವರು ಸಾವನ್ನಪ್ಪಿದ್ದಾರೆ. ಇದು ಇದಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ