ಕಣ್ಣು ಕಾಣದ ವೃದ್ಧೆಯ ಮೇಲೆ ಕಾಮುಕನ ಅಟ್ಟಹಾಸ: ಮನನೊಂದು ಸಾವಿಗೆ ಶರಣಾದ ವೃದ್ಧೆ

ವಿಜಯನಗರ: ಕಣ್ಣು ಕಾಣದ ವೃದ್ಧೆಯ ಮೇಲೆ ಕಾಮುಕನೋರ್ವ ಅಟ್ಟಹಾಸ ಮೆರೆದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಪುರ ತಾಂಡದಲ್ಲಿ ನಡೆದಿದ್ದು, ಘಟನೆಯಿಂದ ನೊಂದ ವೃದ್ಧೆ ಸಾವಿಗೆ ಶರಣಾಗಿದ್ದಾರೆ.
ಲೋಕೇಶ್ ನಾಯ್ಕ್ ಎಂಬಾತ ಮೇ 30ರಂದು ಕಣ್ಣು ಕಾಣದ ತನ್ನ ತಾಯಿಯ ವಯಸ್ಸಿನ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ. ಘಟನೆಯ ಬಳಿಕ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆಯಷ್ಟೇ ಅವರನ್ನು ಮನೆಗೆ ಕರೆತರಲಾಗಿತ್ತು. ಆದರೆ, ಈ ವಯಸ್ಸಿನಲ್ಲಿ ನನಗೆ ಇಂತಹ ಅನ್ಯಾಯ ಆಯಿತಲ್ಲಾ ಎಂದು ನೊಂದ ವೃದ್ಧೆ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆನ್ನಲಾಗಿದೆ.
ಆರೋಪಿ ಲೋಕೇಶ್ ನಾಯ್ಕ್ ಗೆ ಮದುವೆಯಾಗಿ ಮಕ್ಕಳಿದ್ದರೂ ತನ್ನ ತಾಯಿಯ ವಯಸ್ಸಿನ ಮಹಿಳೆಯನ್ನು ಅತ್ಯಾಚಾರ ನಡೆಸಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೂ, ಗ್ರಾಮಸ್ಥರ ಆಕ್ರೋಶ ತೀರಿಲ್ಲ, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw