ಕೊಬ್ಬಿರುವ ದನದ ಮಾಂಸ ತಿಂದರೆ, ಆರೋಗ್ಯ ಚೆನ್ನಾಗಿರುತ್ತದೆ ಅಂತ ಶ್ಲೋಕದಲ್ಲಿ ಇದೆ | ಸಿದ್ದರಾಮಯ್ಯ ಹೇಳಿಕೆ - Mahanayaka

ಕೊಬ್ಬಿರುವ ದನದ ಮಾಂಸ ತಿಂದರೆ, ಆರೋಗ್ಯ ಚೆನ್ನಾಗಿರುತ್ತದೆ ಅಂತ ಶ್ಲೋಕದಲ್ಲಿ ಇದೆ | ಸಿದ್ದರಾಮಯ್ಯ ಹೇಳಿಕೆ

16/01/2021


Provided by

ಮೈಸೂರು:  ದನದ ಮಾಂಸದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೆ ಹೇಳಿಕೆ ನೀಡಿದ್ದು, ಕೊಬ್ಬಿರುವ ದನದ ಮಾಂಸ ತಿಂದರೆ, ಆರೋಗ್ಯ ಚೆನ್ನಾಗಿರುತ್ತದೆ ಎಂದು ಶ್ಲೋಕದಲ್ಲಿಯೇ ಇದೆ ಎಂದು ಅವರು ಹೇಳಿದ್ದಾರೆ.

ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕದಲ್ಲಿಯೇ ಇದೆ.  ಈ ಶ್ಲೋಕ ಬರೆದಿರುವವರು ಯಾರಪ್ಪಾ?  ಸಂಸ್ಕೃತ ಗೊತ್ತಿರುವವರೇ ಅಲ್ಲವೇ? ಹಾಗಾದರೆ ಸಂಸ್ಕೃತದಲ್ಲಿ ತಪ್ಪು ಇದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾನು ಇಲ್ಲಿಯವರೆಗೆ ದನದ ಮಾಂಸ ತಿಂದಿಲ್ಲ. ತಿನ್ನಬೇಕು ಅಂತ ಅನ್ನಿಸಿದರೆ ತಿನ್ನುತ್ತೇನೆ. ಅದನ್ನು  ಕೇಳೋಕೆ ಇವರು ಯಾರು ಎಂದು ಪ್ರಶ್ನಿಸಿದ್ದೇನೆ. ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿ