ರಾಪಿಡ್ ಆಕ್ಷನ್ ಫೋರ್ಸ್ ಸ್ಥಾಪನೆಯಿಂದ ನಕ್ಸಲ್ ನಿಗ್ರಹ , ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲ | ಗೃಹ ಸಚಿವ ಅಮಿತ್ ಶಾ - Mahanayaka
8:08 PM Saturday 18 - October 2025

ರಾಪಿಡ್ ಆಕ್ಷನ್ ಫೋರ್ಸ್ ಸ್ಥಾಪನೆಯಿಂದ ನಕ್ಸಲ್ ನಿಗ್ರಹ , ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲ | ಗೃಹ ಸಚಿವ ಅಮಿತ್ ಶಾ

16/01/2021

ಶಿವಮೊಗ್ಗ: ಭದ್ರಾವತಿಯಲ್ಲಿ ಆರ್ ಎಎಫ್ (ರಾಪಿಡ್ ಆಕ್ಷನ್ ಫೋರ್ಸ್) ಘಟಕ ಸ್ಥಾಪನೆಯಿಂದ ನಕ್ಸಲ್ ನಿಗ್ರಹ, ರಕ್ಷಣಾ ಕಾರ್ಯ ಸೇರಿದಂತೆ ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.


Provided by

ಭದ್ರಾವತಿ ತಾಲೂಕಿನ ಬುಳ್ಳಾಪುರದ  ಡಿಎಆರ್  ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ ಎಎಫ್ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,  ಭದ್ರಾವತಿಯಲ್ಲಿ ಆರ್ ಎಎಫ್ ಘಟಕ ಸ್ಥಾಪನೆಯಿಂದ ಇಡೀ ದಕ್ಷಿಣ ಭಾರತದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ದಂಗೆ ನಿಗ್ರಹ, ಬೃಹತ್ ಸಮಾರಂಭಗಳಿಗೆ ಭದ್ರತೆ,  ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣೆ ನೀಡಲು ಆರ್ ಎಎಫ್ ಅತಿ ದೊಡ್ಡ ಶಕ್ತಿಯಾಗಿದ್ದು,  ಸ್ವಾತಂತ್ರ್ಯದ ಬಳಿಕ ಇಂದಿನ ವರೆಗೂ ಗಲಭೆ, ನಕ್ಸಲರು, ಮಾವೋವಾದಿಗಳು ಹಾಗೂ ಅಹಿತಕರ ಘಟನೆ ನಡೆದರೂ ರಕ್ಷಣೆ ನೀಡಲು ಈ ಯೋಧರು ಶ್ರಮಿಸುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ