ಕೊರೊನಾ ಲಸಿಕೆ ಪಡೆದ 1 ಗಂಟೆಗಳಲ್ಲಿಯೇ ಭದ್ರತಾ ಸಿಬ್ಬಂದಿಯ ಮೇಲೆ ಅಡ್ಡಪರಿಣಾಮ! - Mahanayaka
4:49 AM Thursday 16 - October 2025

ಕೊರೊನಾ ಲಸಿಕೆ ಪಡೆದ 1 ಗಂಟೆಗಳಲ್ಲಿಯೇ ಭದ್ರತಾ ಸಿಬ್ಬಂದಿಯ ಮೇಲೆ ಅಡ್ಡಪರಿಣಾಮ!

17/01/2021

ದೆಹಲಿ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(AIIMS) ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯೊಬ್ಬರು ಕೊವಿಡ್ ಲಸಿಕೆಯನ್ನು ಪಡೆದು ಕೆಲವೇ ಗಂಟೆಗಳಲ್ಲಿ ಅಸ್ವಸ್ಥರಾಗಿದ್ದು, ಅವರ ಮೇಲೆ ಲಸಿಕೆಯು ಅಡ್ಡಪರಿಣಾಮ ಬೀರಿದೆ.


Provided by

ಭದ್ರತಾ ಸಿಬ್ಬಂದಿಗೆ ಇಂದು ಮೊದಲನೆಯ ಹಂತದಲ್ಲಿ ಕೊರೊನಾ ಲಸಿಕೆ ನೀಡಲಾಗಿತ್ತು.  ಲಸಿಕೆ ಪಡೆದು ಒಂದು ಗಂಟೆಗಳಲ್ಲಿಯೇ ಲಸಿಕೆಯು ಅಡ್ಡ ಪರಿಣಾಮ ಬೀರಿದೆ. ಸದ್ಯ ಸಿಬ್ಬಂದಿಯ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು AIIMSನ ವೈದ್ಯರು ತಿಳಿಸಿದ್ದಾರೆ.

ಕೊರೊನಾ ಲಸಿಕೆ ಡಿ ಗ್ರೂಪ್ ದರ್ಜೆಯ ಬಡಪಾಯಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪಶ್ಚಿಮ ಬಂಗಾಳದಲ್ಲಿ 14, ತೆಲಂಗಾಣದಲ್ಲಿ 11 ಹಾಗೂ ದೆಹಲಿಯಲ್ಲಿ 52 ಅಡ್ಡಪರಿಣಾಮ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಲಸಿಕೆಯ ಅಡ್ಡ ಪರಿಣಾಮದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಜ.18ರವರೆಗೆ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಲಸಿಕೆ ಸ್ಥಗಿತಗೊಳಿಸಿರುವುದಾಗಿಯೂ ಸರ್ಕಾರ ತಿಳಿಸಿದೆ.

ಇತ್ತೀಚಿನ ಸುದ್ದಿ